6 ದಿನಗಳ ರಣಬೇಟೆಯ ಬಳಿಕ ಆಗಿದ್ದೇನು..ಹೇಗೆ ಸಾಗಿದೆ ಅಮೃತ ಪಾಲ್ ಸಿಂಗ್ ಶಿಕಾರಿ?
ಆರು ದಿನಗಳಿಂದ ಪರಾರಿಯಾಗಿರುವ ಖಲಿಸ್ತಾನ್ ನಾಯಕ ಅಮೃತಪಾಲ್ ಸಿಂಗ್ ಬಂಧನಕ್ಕಾಗಿ ಪಂಜಾಬ್ ಪೊಲೀಸರು ಪಂಜಾಬ್ -ಹರಿಯಾಣ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ಆರು ದಿನಗಳಿಂದ ಪರಾರಿಯಾಗಿರುವ ಖಲಿಸ್ತಾನ್ ನಾಯಕ ಅಮೃತಪಾಲ್ ಸಿಂಗ್ ಬಂಧನಕ್ಕಾಗಿ ಪಂಜಾಬ್ ಪೊಲೀಸರು ಪಂಜಾಬ್ -ಹರಿಯಾಣ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. ಅಮೃತಪಾಲ್ ಮತ್ತು ಸಹಾಯಕನಿಗೆ ಆಶ್ರಯ ನೀಡಿದ್ದಕ್ಕಾಗಿ ಹರಿಯಾಣ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದು, ವಿಚಾರಣೆಯಲ್ಲಿ ಉತ್ತರಾಖಂಡಕ್ಕೆ ಅಮೃತಪಾಲ್ ಹೋಗಬಹುದು ಎನ್ನುವ ಸುಳಿವು ಸಿಕ್ಕಿದೆ. ಇನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ ದೃಶ್ಯಾವಳಿ ಸಾಕ್ಷೀಯ ಆಧಾರದ ಮೇಲೆ ಅಮೃತ ಪಾಲ್ ಶಹಾಬಾದ್-ಮಾರ್ಕಂಡ ಪಟ್ಟಣದಲ್ಲಿರಬಹುದು ಎಂದು ಹೇಳಲಾಗಿದೆ. ಕಳೆದ ಆರು ದಿನಗಳಿಂದ ಪಂಜಾಬ್‌ನಲ್ಲಿ ಪಾಲ್‌ಗಾಗಿ ಶೋಧ ಮುಂದುವರಿದಿದ್ದು, ಪಂಜಾಬ್‌ನ ಹೊರಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.