Asianet Suvarna News Asianet Suvarna News

ಮೋದಿ ಬ್ರ್ಯಾಂಡ್ ಬಿಜೆಪಿ ಅಸ್ತ್ರ..ಪ್ರತಿಪಕ್ಷಗಳ ಸಿಡಿಮಿಡಿ ಏಕೆ..ಕಾಂಗ್ರೆಸ್, ಜೆಡಿಎಸ್‌ಗೆ ನಷ್ಟಾನಾ..?

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಹೀಗಾಗಿ ಎಲೆಕ್ಷನ್  ಕಾವು ಜೋರಾಗಿದೆ. ಎಲ್ಲಾ ಪಕ್ಷಗಳು ಗೆಲ್ಲಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ.
 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ ಹೀಗಾಗಿ ಎಲೆಕ್ಷನ್  ಕಾವು ಜೋರಾಗಿದೆ. ಎಲ್ಲಾ ಪಕ್ಷಗಳು ಗೆಲ್ಲಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಅದರಲ್ಲೂ  ಬಿಜೆಪಿ ಒಂದು ಹೆಜ್ಜೆ ಮುಂದೆ ಹೋಗಿದೆ.. ಬಿಜೆಪಿ ಕರ್ನಾಟಕ ಮತಯುದ್ಧಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಸಾರಥಿಯಾಗಿದ್ದಾರೆ..ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿಯವರು ಬ್ಯಾಕ್ ಟು ಬ್ಯಾಕ್ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.  ಆ ಮೂಲಕ ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಗೆಲುವಿನ ಜಯಭೇರಿ ಬಾರಿಸಲು ಪಣ ತೊಟ್ಟಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಯಾವಾಗೆಲ್ಲಾ ರಾಜ್ಯಕ್ಕೆ ಬರುತ್ತಾರೋ  ಆಗೆಲ್ಲಾ ಪ್ರತಿ ಪಕ್ಷಗಳ ನಾಯಕರು ವಾಕ್ಸಮರ ಮಾಡುತ್ತಾರೆ. ಮೋದಿ ಪದೇ ಪದೇ ಯಾಕ್ ಬರ್ತಾರೆ ಅಂತ ಸಿಡಿದೇಳುತ್ತಿದ್ದಾರೆ. ಹಾಗಾದ್ರೆ ಮೋದಿ ರಾಜ್ಯಕ್ಕೆ ಬರೋದಕ್ಕೂ, ಎದುರಾಳಿಗಳು ಸಿಡಿದೇಳೋದಕ್ಕೂ ಏನ್ ಕಾರಣ.. ಮೋದಿ ಟ್ರಬಲ್ ಯಾರಿಗೆ ಎಷ್ಟು ಅನ್ನೋದದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ..

Video Top Stories