Asianet Suvarna News Asianet Suvarna News

ಫುಟ್ ಪಾತ್ ರೈಡಿಂಗ್ ವಿರುದ್ಧ ಸಿಡಿದೆದ್ದ ಪಾದಚಾರಿ: ಇಬ್ಬರ ನಡುವೆ ಕಿರಿಕ್ : ವಿಡಿಯೋ ವೈರಲ್‌

ಫುಟ್ ಪಾತ್ ರೈಡಿಂಗ್ ವಿರುದ್ಧ ಬೆಂಗಳೂರಿನಲ್ಲಿ ಪಾದಚಾರಿಯೊಬ್ಬರು ಸಿಡಿದೆದ್ದಿದ್ದಾರೆ. ಓಡಾಡುವ ಫುಟ್ ಪಾತ್‌ನಲ್ಲಿ ಸವಾರಿ ಮಾಡುವಂತಿಲ್ಲ. ಯಾಕೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಪಾದಚಾರಿಯೊಬ್ಬರು ಫುಟ್‌ ಪಾತ್‌ ಮೇಲೆ ಬೈಕ್‌ ಓಡಿಸುತ್ತಿದ್ದ ಸವಾರನ ವಿರುದ್ಧ ಸಿಡಿದೆದ್ದಿದ್ದಾರೆ. ಓಡಾಡುವ ಫುಟ್‌ ಪಾತ್‌ನಲ್ಲಿ ಸವಾರಿ ಯಾಕೆ ಮಾಡುತ್ತಿದ್ದೀರಿ. ಇಲ್ಲಿ ಬೈಕ್‌ ಓಡಿಸುವಂತಿಲ್ಲ ಎಂದು ಬೈಕ್‌ ಅಡ್ಡ ಹಾಕಿ ಪಾದಚಾರಿ ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಕಿರಿಕ್ ಉಂಟಾಗಿದ್ದು, ಇಬ್ಬರೂ ಕೈ -ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಹೋಗಿದ್ದಾರೆ. ರಸ್ತೆ ಫ್ರೀ ಇದ್ದರೂ ಫುಟ್ ಪಾತ್ ಮೇಲೆ ಸವಾರ ಸವಾರಿ ಮಾಡುತ್ತಿದ್ದ, ಹೀಗಾಗಿ ಫುಟ್ ಪಾತ್ ನಿಂದ ವಾಹನ ರಸ್ತೆಗೆ ಇಳಿಸುವವರೆಗೂ ಪಾದಚಾರಿ ತನ್ನ ಪಟ್ಟನ್ನು ಬಿಟ್ಟಿರಲಿಲ್ಲ. ಆದ್ರೆ ಪೊಲೀಸರು ಮಾತ್ರ 'ಗೆಸ್ಟ್ ಅಪೀರಿಯನ್ಸ್' ನಂತೆ ಬಂದು ಹೋಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ವೀಕ್ಷಿಸಿ: Karnataka Election Results 2023: ಡಿಕೆ ಶಿವಕುಮಾರ್‌ಗೆ 'ಕೈ' ಶಾಸಕರ ಬೆಂಬಲದ ಕೊರತೆ: ಸಿದ್ದುನೇ ರಾಜ್ಯದ ಮುಂದಿನ ಸಿಎಂ ?