ಶಿಕಾರಿಪುರದಲ್ಲಿ ಜೋರಾಗಿದೆ ಮತ ಶಿಕಾರಿ..ತಂದೆ ಬಿ.ಎಸ್.ವೈ ಕ್ಷೇತ್ರದಲ್ಲಿ ನಿಲ್ತಾರಾ ಪುತ್ರ ವಿಜಯೇಂದ್ರ..?
2023ರ ಕರ್ನಾಟಕ ಕುರುಕ್ಷೇತ್ರದ ಹೈವೋಲ್ಟೇಜ್ ಕಾರ್ಯಕ್ರಮ ಅತಿರಥರ ಅಖಾಡದಲ್ಲಿ ಶಿಕಾರಿಪುರ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ಮಾಡಲಾಗಿದೆ.
ಶಿಕಾರಿಪುರದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಮತ ಬೇಟೆಗೆ ಮುಂದಾಗಿದ್ದು, ಕರ್ನಾಟಕ ರಾಜಕೀಯ ಕಂಡ ಅತ್ಯಂತ ಪವರ್‌ಫುಲ್ ಲೀಡರ್ ಬೂಕನಕೆರೆ ಸಿದ್ದಲಿಂಗಪ್ಪ, ಬಿ ಎಸ್ ಯಡಿಯೂರಪ್ಪ ಕ್ಷೇತ್ರವಾಗಿರುವುದಕ್ಕೆ ಶಿಕಾರಿಪುರ ಹೈವೋಲ್ಟೇಜ್ ಕ್ಷೇತ್ರ . ಯಡಿಯೂರಪ್ಪ ಅಂದ್ರೆ ಶಿಕಾರಿಪುರ,ಶಿಕಾರಿಪುರ ಅಂದ್ರೆ ಬಿಎಸ್‌ವೈ ಒಂದಕೊಂದು ಬಿಟ್ಟಿರಲಾಗದಷ್ಟು ಜೋಡಿ. 1993 ರಿಂದ ಶಿಕಾರಿಪುರ ಕ್ಷೇತ್ರ ಸತತವಾಗಿ ಯಡಿಯೂರಪ್ಪನ ಬಳಿ ಇದೆ. 1999ರಲ್ಲಿ ಒಂದು ಚುನಾವಣೆಯಲ್ಲಿ ಪರಾಭವ ಅನುಭವಿಸಿದರು ಬಿಟ್ರೆ ಬಿಎಸ್‌ವೈ 1983,1985, 1989, 1994, 2004, 2008, 2018 ಹೀಗೆ ಸತತವಾಗಿ ಶಿಕಾರಿ ಪುರ ಕ್ಷೇತ್ರದಿಂದ ಗೆಲ್ಲುತ್ತಾ ಬರುತ್ತಿದ್ದಾರೆ.ಆದರೆ ಈ ಬಾರಿ ಶಿಕಾರಿಪುರ ಕ್ಷೇತ್ರಕ್ಕೆ ಒಂದು ಕೂತುಹಲ ಬಂದಿರುವುದು ಬಿ ಎಸ್ ಯಡಿಯೂರಪ್ಪ ನಾನು ಚನಾವಣೆ ನಿಲ್ಲುವುದಿಲ್ಲ ನನ್ನ ಮಗ ವಿಜಯೇಂದ್ರ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ದಿಸುತ್ತಾರೆ ಎಂದು ಘೋಷಣೆ ಮಾಡಿದ ಬಳಿಕ.