ಬ್ರೇಕ್ ಹೊಡೆದ ರಭಸಕ್ಕೆ ಚರಂಡಿಗೆ ಬಿದ್ದ ಮಹಿಳೆ: ವೀಡಿಯೋ ವೈರಲ್

ಅಪಘಾತದ ಹಲವು ಭಯಾನಕ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಆಘಾತಕಾರಿ ವೀಡಿಯೋ ವೈರಲ್ ಆಗಿದ್ದು, ಭಯ ಮೂಡಿಸುತ್ತಿದೆ.

First Published Aug 16, 2023, 3:52 PM IST | Last Updated Aug 16, 2023, 3:52 PM IST

ಅಪಘಾತದ ಹಲವು ಭಯಾನಕ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಆಘಾತಕಾರಿ ವೀಡಿಯೋ ವೈರಲ್ ಆಗಿದ್ದು, ಭಯ ಮೂಡಿಸುತ್ತಿದೆ. ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಸಿಗ್ನಲ್ ಬಿದ್ದ ಹಿನ್ನೆಲೆಯಲ್ಲಿ ಬ್ರೇಕ್ ಹಾಕಿದ್ದು, ಬ್ರೇಕ್ ಹಾಕಿದ ರಭಸಕ್ಕೆ ಅವರು ಆಯತಪ್ಪಿ ರಸ್ತೆ ಬದಿಯೇ ಇದ್ದ ಚರಂಡಿಯೊಳಗೆ ಮಗುಚಿ ಬಿದ್ದಿದ್ದಾರೆ. ಈ ವೀಡಿಯೋ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನಿನ್ನೆಯಷ್ಟೇ ದೇಶಾದ್ಯಂತ 77ನೇ ಸ್ವಾತಂತ್ರೋತ್ಸವ ಬಹಳ ಸಂಭ್ರಮದಿಂದ ಆಚರಿಸಲಾಯ್ತು, ದೇಶದ ಪ್ರಧಾನಿಯಿಂದ ಹಿಡಿದು, ಸೆಲೆಬ್ರಿಟಿಗಳು ಸಾಮಾನ್ಯ ನಾಗರಿಕರು ಸೇರಿ ಪ್ರತಿಯೊಬ್ಬರು ತಮ್ಮ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಿದ್ದರು.  ಅದೇ ರೀತಿ ಸಮುದ್ರದಾಳದಲ್ಲಿಯೂ ಒಬ್ಬರು ರಾಷ್ಟ್ರಧ್ವಜರೋಹಣ ನೆರವೇರಿಸಿದರು. ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮಿಳುನಾಡಿನ ರಾಮೇಶ್ವರ ಕಡಲ ತೀರದಲ್ಲಿ ಈ ರಾಷ್ಟಧ್ವಜರೋಹಣ ನಡೆದಿದೆ. ಇಂಡಿಯನ್ ಕೋಸ್ಟ್‌ಗಾರ್ಡ್‌ ಈ ಮಹತ್ತರವಾದ ಕಾರ್ಯ ಮಾಡಿದ್ದು, ಈ ವೀಡಿಯೋ ಈಗ ವೈರಲ್ ಆಗಿದೆ. ಈ ವೀಡಿಯೋವೋ ಸೇರಿದಂತೆ ಇನ್ನಷ್ಟು ಹಲವು ವೈರಲ್ ವೀಡಿಯೋಗಳು ಇಲ್ಲಿವೆ ವೀಕ್ಷಿಸಿ

Video Top Stories