Asianet Suvarna News Asianet Suvarna News

ಚಿಕ್ಕಮಗಳೂರಿಗೂ ಹಬ್ಬಿತು ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಕೂಗು!

ಉತ್ತರ ಕನ್ನಡ, ಕೊಡಗಿನ ಬಳಿಕ ಮತ್ತೊಂದು ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಕೂಗು; ಯುವ ಸಮುದಾಯದಿಂದ ಮಲ್ಟಿ ಸ್ಪೇಷಾಲಿಟಿ ಅಸ್ಪತ್ರೆಗೆ ಅಭಿಯಾನ; ಜಿಲ್ಲೆಯಷ್ಟೆಯಲ್ಲದೆ ಹೊರ ದೇಶದಲ್ಲೂ ಅಭಿಯಾನಕ್ಕೆ ಸಾಥ್

ಚಿಕ್ಕಮಗಳೂರು (ಜು.27): ಇತ್ತೀಚೆಗೆ ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಾಗಿ ಭಾರೀ ಅಭಿಯಾನಗಳು ನಡೆದಿದ್ದುವು. ಈಗ ಅವುಗಳ ಸಾಲಿಗೆ ಮತ್ತೊಂದು ಜಿಲ್ಲೆ ಸೇರ್ಪಡೆಯಾಗಿದೆ. ಚಿಕ್ಕಮಗಳೂರಿನಲ್ಲೂ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಕೂಗೆದ್ದಿದೆ.

ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಅತೀ ಹೆಚ್ಚು ವಿಸ್ತ್ರೀರ್ಣ ಹೊಂದಿರುವ ಜಿಲ್ಲೆಗಳ ಪೈಕಿ ಒಂದು. ಅದ್ರಲ್ಲೂ ಕಾರ್ಮಿಕರ ಸಂಖ್ಯೆಯು ಹೆಚ್ಚಾಗಿದೆ. ಕೂಲಿ ಕಾರ್ಮಿಕರಿಗೆ ಆರೋಗ್ಯದ ಬಗ್ಗೆ ಟ್ರಿಂಟ್ ಮೆಂಟ್ ಸಿಗೋಕು ಸರ್ಕಾರಿ ಅಸ್ಪತ್ರೆ ಇಲ್ಲ ಅನ್ನೋ ಕೂಗು ಇಂದು ನಿನ್ನೆಯದಲ್ಲ.

ಜಿಲ್ಲಾಸ್ಪತ್ರೆಯಲ್ಲಿ ಮೇಜರ್ ಅಂದ್ರೆ ಶಿವಮೊಗ್ಗ, ಮಂಗಳೂರು ಹಾಸನಕ್ಕೆ ಹೋಗ್ಲೇ ಬೇಕು. ಸರ್ಕಾರ ಜನಪ್ರತಿನಿಧಿಗಳ ಮುಂದೆ ಮೆಡಿಕಲ್ ಕಾಲೇಜ್ ಓಪನ್ ಮಾಡಿ ಅಂತಾ ಬೇಡಿಕೆಯನ್ನ ಇಟ್ಟಾಯ್ತು. ಅದ್ರೂ ಇಲ್ಲಿಯವರೆಗಂತೂ ಮಲ್ಟಿ ಸ್ಪೇಷಾಲಿಟಿ ಅಸ್ಪತ್ರೆಯಂತು ಚಿಕ್ಕಮಗಳೂರಿಗೆ ಸಿಗಲೇ ಇಲ್ಲ.

ಈಗ ಇಲ್ಲಿಯ ಯುವ ಸಮುದಾಯ ಹೊಸದೊಂದು ಅಭಿಯಾನಕ್ಕೆ ಚಾಲನೆ ನೀಡಿದೆ. ಎಂಎಸ್ ಹಾಸ್ಪಿಟಲ್ ಅನ್ನೋ ಲೋಗೊದೊಂದಿಗೆ ಅಭಿಯಾನ ನಡೆಸಲಾಗ್ತಾಇದೆ. ಸೋಶಿಯಲ್ ಮೀಡಿಯಾದಲ್ಲಿ ಯುವಪೀಳಿಗೆ ಬೆಂಬಲ ವ್ಯಕ್ತಪಡಿಸೋ ಮೂಲಕ ಡಿಪಿ ಸ್ಟೇಟಸ್ ಗೆ ಹಾಕಿ ಸರ್ಕಾರಕ್ಕೆ ಒತ್ತಾಯ ಮಾಡ್ತಾ ಇದ್ದಾರೆ.

Video Top Stories