ಸ್ವಿಮ್ಮಿಂಗ್‌ಪೂಲ್‌ನಲ್ಲಿ ಈಜುತ್ತಲೇ ಪ್ರಾಣ ಬಿಟ್ಟ ಯುವಕ: ಸಾವಿನ ಕೊನೆಯ ಕ್ಷಣದ ವಿಡಿಯೋ ಸೆರೆ
ಸ್ವಿಮ್ಮಿಂಗ್‌ಪೂಲ್‌ನಲ್ಲಿ ಈಜವಾಗಲೇ ಮೃತಪಟ್ಟ ಯುವಕ| ಹುಬ್ಬಳ್ಳಿಯ ಪ್ಲ್ಯಾಶ್ ಸ್ವಿಮ್ಮಿಂಗ್‌ಪೂಲ್‌ನಲ್ಲಿ ನಡೆದ ಘಟನೆ| ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಸಿರಾಜ್ ಅಣ್ಣಿಗೇರಿ ಮೃತ ಯುವಕ| ಯುವಕ ಮುಳುಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ|
ಹುಬ್ಬಳ್ಳಿ(ಮಾ.12): ಸ್ವಿಮ್ಮಿಂಗ್‌ಪೂಲ್‌ನಲ್ಲಿ ಈಜವಾಗಲೇ ಯುವಕನೊಬ್ಬ ಪ್ರಾಣಬಿಟ್ಟ ಘಟನೆ ನಗರದಲ್ಲಿ ನಡೆದಿದೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಸಿರಾಜ್ ಅಣ್ಣಿಗೇರಿ (24) ಮೃತ ಯುವಕನಾಗಿದ್ದಾನೆ. ಸಿರಾಜ್ ತನ್ನ ಸ್ನೇಹಿತರೊಂದಿಗೆ ವಿದ್ಯಾನಗರದ ಪ್ಲ್ಯಾಶ್ ಸ್ವಿಮ್ಮಿಂಗ್‌ಪೂಲ್‌ಗೆ ಈಜಾಡಲು ಬಂದಿದ್ದ.
ಈಜಾಡುತ್ತಲೇ ನೀರಲ್ಲಿ ಸಿರಾಜ್ ಮುಳುಗಿದ್ದಾನೆ. ಯುವಕ ಮುಳುಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.