Asianet Suvarna News Asianet Suvarna News

'ನಾನು ಸತ್ತ ಮೇಲೆ ಮನೆಯವರಿಗೆ ಬಾದಾಮಿ ಹಾಲು ಕುಡಿಸಿ'

ನಾನು ಸತ್ತ ಮೇಲೆ ನಮ್ಮ ಮನೆಯವರಿಗೆ ಬಾದಾಮಿ ಹಾಲು ಕುಡಿಸಿ| ವಿಚಿತ್ರ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವ್ಯಕ್ತಿ| ವಿಜಯಪುರದಲ್ಲಿ ನಡೆದ ಘಟನೆ| ರೈಲು ಹಳಿಗೆ ಬಿದ್ದು ಆತ್ಮಹತ್ಯೆಗೆ ಶರಣು|

First Published Dec 30, 2019, 11:43 AM IST | Last Updated Dec 30, 2019, 11:43 AM IST

ವಿಜಯಪುರ(ಡಿ.30): ನಾನು ಸತ್ತ ಮೇಲೆ ನಮ್ಮ ಮನೆಯವರಿಗೆ ಬಾದಾಮಿ ಹಾಲು ಕುಡಿಸಿ ಎಂದು ವ್ಯಕ್ತಿಯೊಬ್ಬ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ. ವಿಶ್ವನಾಥ್ ಗಂಜ್ಯಾಳ್ ಎಂಬಾತ ಸತ್ತ ಮೇಲೆ ನನ್ನ ಬಗ್ಗೆ ಮಾತನಾಡುವವರಿಗೂ ಹಾಗೂ ನನ್ನ ತಾಯಿ ಅಕ್ಕ ಸೇರಿದಂತೆ ಎಲ್ಲರಿಗೂ ಬಾದಾಮಿ ಹಾಲು ಕುಡಿಸಿ ಎಂದು ಡೆತ್‌ನೋಟ್ ಬರೆದಿಟ್ಟು ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ನನ್ನ ಬಗ್ಗೆ ಮಾತನಾಡುವವರಿಗೂ ಬಾದಾಮಿ ಕೊಡಿ ಎಂದು ವಿಚಿತ್ರವಾದ ಡೆತ್‌ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಜಯಪುರ ಸಂಬಂಧ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Video Top Stories