ಟ್ರೈಬಲ್ ಉಡುಗೆ ತೊಟ್ಟು ಹದಿ ವಯಸ್ಸಿಗೆ ಗುಡ್ ಬೈ ಹೇಳಿದ ಯುವಕ
ಮನುಷ್ಯನಿಗೆ ಏನೇನೋ ಮಾಡಬೇಕೆಂಬ ಆಸೆ, ಕನಸುಗಳಿರುತ್ತವೆ. ಕೆಲವೊಂದು ಆಸೆಗಳನ್ನು ಪೂರೈಸಿಕೊಳ್ಳಲು ಮನಸ್ಸು ಮಾಡಬೇಕೇ ಹೊರತು, ಹೆಚ್ಚಿನ ಶ್ರಮ ಹಾಗೂ ಹಣ ಬೇಡ. ಅಂಥದ್ದೊಂದನ್ನು ಬಯಕೆಯನ್ನು ಈಡೇರಿಸಿಕೊಂಡ ಉತ್ತರ ಕನ್ನಡದ ಈ ಯುವಕ ತನ್ನ ಹದಿ ವಯಸ್ಸಿಗೆ ಗುಡ್ ಬೈ ಹೇಳಿದ್ದಾನೆ. ಅಷ್ಟಕ್ಕೂ ಅಂಥದ್ದೇನಾಸೆ? ನೋಡಿ...
ಕಾರವಾರ (ಜೂ.22): ಪಬ್, ಬಾರಿನಲ್ಲಿ ಕುಡಿದು, ಕುಪ್ಪಳಿಸಿ ಬರ್ತ್‌ಡೇ ಆಚರಿಸಿಕೊಳ್ಳುವುದು ಗೊತ್ತು. ಇಲ್ಲವೋ ತಮ್ಮಿಷ್ಟ ಬಂದ ಪ್ರದೇಶಗಳಿಗೆ ಹೋಗಿ, ಪಾರ್ಟಿ ಮಾಡಿ ಹುಟ್ಟು ಹಬ್ಬವನ್ನು ಸಾರ್ಥಕಗೊಳಿಸುವ ಮಂದಿ ನಮ್ಮೊಂದಿಗಿದ್ದಾರೆ. ಈ ಮಧ್ಯೆಯೇ ಉತ್ತರ ಕನ್ನಡದ ಯುವಕನೊಬ್ಬ ವಿಭಿನ್ನವಾಗಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕಾರವಾರದ ದೇವಲಿವಾಡದ ವಿಘ್ನೇಶ್ ಪೆಡ್ನೇಕರ್ ತಮ್ಮ 18ನೇ ವರ್ಷದ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಉತ್ತರ ಕನ್ನಡದಲ್ಲಿ ಪ್ರಸಿದ್ದವಾಗಿರುವ ಸಿದ್ಧ ಜನಾಂಗದವರ ಉಡುಗೆ ತೊಟ್ಟು, ಸ್ನೇಹಿತರೊಂದಿಗೆ ಕೇಕ್ ಕಟ್ ಮಾಡಿ, ಹದಿ ವಯಸ್ಸಿಗೆ ವಿಭಿನ್ನವಾಗಿ ಗುಡ್ ಬೈ ಹೇಳಿದ್ದಾರೆ.
ಸುಗ್ಗಿ ಹಬ್ಬದಲ್ಲಿ ಹೆಣ್ಣಿನ ವೇಷ ತೊಟ್ಟು, ಸುಗ್ಗಿ ಕುಣಿತ ಮಾಡುವ ವಿಘ್ನೇಶ್‌ಗೆ ತಮ್ಮು ಹುಟ್ಟುಹಬ್ಬವನ್ನೂ ವಿಶೇಷವಾಗಿ ಆಚರಿಸಿಕೊಳ್ಳುವ ಬಯಕೆ ಇತ್ತು. ಈ ಆಸೆಯನ್ನು ಈಡೇರಿಸಿಕೊಂಡಿದ್ದು ಹೀಗೆ...