Asianet Suvarna News Asianet Suvarna News

ಪ್ರವಾಹ ತಂದ ಅಧ್ವಾನ: ಮುಳುಗಿತು ಭೀಮೆಯ ಕಂಗಳೇಶ್ವರ ದೇವಸ್ಥಾನ!

Aug 8, 2019, 2:28 PM IST

ಯಾದಗಿರಿ(ಆ.08): ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಸುಮಾರು 2.50 ಲಕ್ಷ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಯಾದಗಿರಿಯಿಂದ ಕೂಗಳತೆ ದೂರದಲ್ಲಿರುವ ಕಂಗಳೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ. ಈ ಭಾಗದಲ್ಲಿ ಕಂಗಳೇಶ್ವರ ದೇವಸ್ಥಾನ ಅತ್ಯಂತ ಜನಪ್ರಿಯವಾಗಿದ್ದು, ದೇವಸ್ಥಾನ ಭೀಮಾ ನದಿಯಲ್ಲಿ ಸಂಪೂರ್ಣವಾಗಿ ಮುಳಗಿದ ಪರಿಣಾಮ ಭಕ್ತರು ದೇವರ ದರ್ಶನ ಪಡೆಯದೇ ವಾಪಸ್ ಮರಳುತ್ತಿದ್ದಾರೆ. ಇನ್ನು ಉಜನಿ ಜಲಾಶಯದಿಂದ ನಿರಂತರವಾಗಿ ನೀರು ಹರಿದು ಬರುತ್ತಿರುವುದರಿಂದ ಯಾದಗಿರಿ ಮತ್ತು ಸುತ್ತಮುತ್ತಲಿನ ಗ್ರಾಮಗಳು ಮುಳುಗಡೆ ಭೀತಿ ಎದುರಿಸುತ್ತದೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...