ದೇವರ ರೂಪದಲ್ಲಿ ಪೂಜಿಸಲ್ಪಡುತ್ತಿದ್ದ ಕಾಡು ಹಂದಿಯ ಹತ್ಯೆ..!

ದೇವರ ರೂಪದಲ್ಲಿ ಪೂಜಿಸುತ್ತಿದ್ದ ಕಾಡು ಹಂದಿಯ ಹತ್ಯೆಯನ್ನು ಮಾಡಲಾಗಿದೆ. ಈ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯಾದ ಜನತಾ ಕಾಲೋನಿಯಲ್ಲಿ ನಡೆದಿದೆ.
 

First Published Aug 6, 2023, 2:45 PM IST | Last Updated Aug 6, 2023, 2:45 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ದೇವರ ರೂಪದಲ್ಲಿ ಪೂಜಿಸಲ್ಪಡುತ್ತಿದ್ದ(worship) ಕಾಡು ಹಂದಿಯ ಹತ್ಯೆ(pig) ಮಾಡಲಾಗಿದೆ. ಕಾಡುಹಂದಿಗೆ ಕೋಳಿ ಮಾಂಸದಲ್ಲಿ ನಾಡಬಾಂಬ್(bomb) ಇಟ್ಟು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚೆಂಡಿಯಾದ ಜನತಾ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಊರಿನ ಜನರ ಪ್ರೀತಿ ಸಂಪಾದಿಸಿ ಅವರಿಂದಲೇ ದೈವ ಎಂದು ಕಾಡುಹಂದಿ ಪೂಜೆಗೆ ಒಳಗಾಗುತ್ತಿತ್ತು. ಚೆಂಡಿಯಾ ಗ್ರಾಮದಲ್ಲಿ ಸುಮಾರು 5 ವರ್ಷಗಳಿಂದ ಕಾಡಿನಿಂದ ನಾಡಿಗೆ ಕಾಡುಹಂದಿ ಬರುತ್ತಿತ್ತು. ಕಾಂತಾರ ಸಿನಿಮಾದ ಬಳಿಕವಂತೂ ಬಹಳಷ್ಟು ಜನರು ಇದನ್ನು ದೈವರೂಪ ಅಂದುಕೊಂಡು ಭಕ್ತಿಯಿಂದ ಆಹಾರ ನೀಡ್ತಿದ್ರು. ಆದ್ರೆ, ಮೊನ್ನೆ ಶನಿವಾರ ಬೆಳಗ್ಗೆ 11ಕ್ಕೆ ಬ್ಲಾಸ್ಟ್ ಶಬ್ದವಾಗಿದ್ದು, ಸ್ಥಳದಲ್ಲಿ ಜನರು ಪೂಜಿಸ್ತಿದ್ದ ಕಾಡು ಹಂದಿ ಸತ್ತು ಬಿದ್ದಿತ್ತು. ಜನರು ನೋಡಿದಾಗ ರಿಕ್ಷಾವೊಂದು ವೇಗದಲ್ಲಿ ಸಾಗಿದ್ದು, ಜನರು ನೀಡಿದ ದೂರಿನ ಮೇರೆಗೆ ಅಧಿಕಾರಿಗಳಿಂದ ಆಮದಳ್ಳಿಯ ಸೀಫ್ರನ್ ಥಾಮಸ್ ಫೆರ್ನಾಂಡೀಸ್ ಎಂಬ ಶಂಕಿತನನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ವೀಕ್ಷಿಸಿ:  ಶಾಸಕರು Vs ಸಚಿವರು: ರಾಯರೆಡ್ಡಿ, ಬಿ.ಆರ್‌. ಪಾಟೀಲ್‌ ಬೆನ್ನಲ್ಲೇ ಮತ್ತೊಬ್ಬ ಶಾಸಕ ಅಸಮಾಧಾನ!