ಅಂತಾರಾಷ್ಟ್ರೀಯ ಮಹಿಳಾ ದಿನ: ಮೈಸೂರು- ಬೆಂಗಳೂರು ರೈಲು ಓಡಿಸಿದ ನಾರಿಯರು!

ಇಂದು ಅಂತರರಾಷ್ಟ್ರೀಯ ಮಹಿಳಾ ದಿನ| ಮೈಸೂರಿನಿಂದ ಬೆಂಗಳೂರು ರೈಲಿನಲ್ಲಿ  ರೈಲು ನಿರ್ವಹಣೆ ಮಾಡಿದ ಮಹಿಳಾ ಸಿಬ್ಬಂದಿ|ಟಿಟಿಓ, ಆರ್‌ಪಿಎಫ್ ಪೊಲೀಸ್, ರೈಲ್ವೆ ಗಾರ್ಡ್ ಸೇರಿ ಎಲ್ಲಾ 15 ಮಂದಿ‌ ಸಿಬ್ಬಂದಿಗಳು ಮಹಿಳೆಯರೇ|

First Published Mar 8, 2020, 6:43 PM IST | Last Updated Mar 8, 2020, 6:43 PM IST

ಮೈಸೂರು[ಮಾ.08]: ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಮೈಸೂರಿನಿಂದ ಬೆಂಗಳೂರು ರೈಲಿನಲ್ಲಿ ಮಹಿಳೆಯರೇ ಸಂಪೂರ್ಣ ರೈಲು ನಿರ್ವಹಣೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಮೈಸೂರಿನಿಂದ ಬೆಂಗಳೂರಿಗೆ ಹೊರಟ ಟಿಪ್ಪಿ ಎಕ್ಸ್‌ಪ್ರೆಸ್‌ ರೈಲು ಗಾಡಿಯನ್ನು ಮಹಿಳಾ ಲೋಕೋ ಪೈಲಟ್ ಹಾಗೂ ಮಹಿಳಾ ಅಸಿಸ್ಟೆಂಟ್ ಲೋಕೋ ಪೈಲಟ್ ನಡೆಸಿದ್ದಾರೆ. 

ಅಷ್ಟು ಮಾತ್ರವಲ್ಲ ಚಲಿಸುವ ರೈಲಿನಲ್ಲಿ ಕೆಲಸ ನಿರ್ವಹಿಸುವ ಟಿಟಿಓ, ಆರ್‌ಪಿಎಫ್ ಪೊಲೀಸ್, ರೈಲ್ವೆ ಗಾರ್ಡ್ ಸೇರಿ ಎಲ್ಲಾ 15 ಮಂದಿ‌ ಸಿಬ್ಬಂದಿಗಳು ಮಹಿಳೆಯರೇ ಆಗಿದ್ದು ವಿಶೇಷವಾಗಿತ್ತು. ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕಿ ಅಪರ್ಣಾ ಗಾರ್ಗ್ ಹೂ ನೀಡಿ ಹುರಿದುಂಬಿಸಿದ್ದಾರೆ. ಬಹಳ ಜಾಗರೂಕತೆಯಿಂದ ರೈಲು ಓಡಿಸಿದ ಲೋಕೊ ಪೈಲಟ್‌ ಬಾಲಸಿವ ಪಾರ್ವತಿ ಹಾಗೂ ಸಹ ಲೋಕೊ ಪೈಲಟ್ ರಂಗೋಲಿ ಪಾಟೀಲ್‌ ರೈಲು ಓಡಿಸುವುದರಲ್ಲಿ ತಮ್ಮ ಸಾಧನೆ ಮೆರೆದಿದ್ದಾರೆ.

Video Top Stories