ಹುಬ್ಬಳ್ಳಿಯಲ್ಲಿ ಅದ್ದೂರಿ ಹನುಮಾನ ಚಾಲೀಸಾ ಶೋಭಾಯಾತ್ರೆ

ಶ್ರೀ ಹನುಮಾನ ಪರಿವಾರ ವತಿಯಿಂದ ಹುಬ್ಬಳ್ಳಿಯ ಮೂರುಸಾವಿರ ಮಠದ ಗಂಗಾಧರ ಶಾಲೆಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹನುಮಾನ ಚಾಲೀಸಾ ಶೋಭಾಯಾತ್ರೆಗೆ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು.
 

First Published Oct 30, 2022, 8:06 PM IST | Last Updated Oct 30, 2022, 8:06 PM IST

ಹುಬ್ಬಳ್ಳಿ (ಅ.30): ಶ್ರೀ ಹನುಮಾನ ಪರಿವಾರ ವತಿಯಿಂದ ಹುಬ್ಬಳ್ಳಿಯ ಮೂರುಸಾವಿರ ಮಠದ ಗಂಗಾಧರ ಶಾಲೆಯ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಹನುಮಾನ ಚಾಲೀಸಾ ಶೋಭಾಯಾತ್ರೆಗೆ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು. ಮೆರವಣಿಗೆಯ ಮೂರುಸಾವಿರ ಮಠದ ಗಂಗಾಧರ ಶಾಲೆಯ ಆವರಣದಿಂದ ಆರಂಭವಾಗಿ, ದಾಜಿಬಾನ್ ಪೇಟೆ, ಕೊಪ್ಪಿಕರ ರಸ್ತೆ ಮಾರ್ಗವಾಗಿ ಲ್ಯಾಮಿಂಗ್ಟನ್ ಶಾಲೆ ಆವರಣ ತಲುಪಿತು. ದಾರಿಯುದ್ದಕ್ಕೂ ಹನುಮಾನ ಮಹಾರಾಜ್ ಕೀ ಜೈ ಎಂದು ಜಯಘೋಷ ಮೊಳಗಿಸಿದರು. ದಾಂಡಿಯಾ, ಲೇಝಿಮ್, ವಾರ್ಕರಿ, ಸೇರಿ ಒಟ್ಟು 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಶೋಭಾಯಾತ್ರೆಯಲ್ಲೊ ಶ್ರೀ ಭಗ್ವವತ್ಪಾದಂ ಆಧ್ಯಾತ್ಮಿಕ ಸಂಸ್ಥೆಯ ಅವಧೂತ ಶ್ರೀ ರಮೇಶ ಗುರೂಜಿ, ಶಿಲ್ಪಾ ಶೆಟ್ಟರ್, ಸುಮಿತ್ರಾ ದೇಶಪಾಂಡೆ ಸೇರಿದಂತೆ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು. ಯಾತ್ರೆಯುದ್ದಕ್ಕೂ ಮೊಳಗಿದ ಹನುಮಾನ ಮಹಾರಾಜ್ ಕೀ ಜೈ ಎಂದು ಜಯಘೋಷ. ಶ್ರೀರಾಮ, ಹನುಮಾನ್, ಲಕ್ಷ್ಮಣ, ಸೀತಾ ಮಾತೆಯ ವೇಷ ತೊಟ್ಟು ಗಮನ ಸೆಳೆದ ಮಹಿಳೆಯರು. ಕೋಲಾಟ, ಜಾಂಜ್, ಪೂರ್ಣಕುಂಭ, ಭರತನಾಟ್ಯಂ, ದಾಂಡಿಯಾ. ಹೀಗೆ 40ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಶೋಭಾಯಾತ್ರೆಗೆ ಗಮನ ಸೆಳೆಯಿತು.

Video Top Stories