Asianet Suvarna News Asianet Suvarna News

ಕಾಫಿನಾಡು ಮಡಿಕೇರಿಯಲ್ಲಿ ಮಾವು ಮೇಳ; ಖರೀದಿಗೆ ಮುಗಿಬಿದ್ದ ಜನ

- ಕೊಡಗು ತೋಟಗಾರಿಕಾ ಇಲಾಖೆ ಮತ್ತು ಹಾಪ್ ಕಾಮ್ಸ್ ವತಿಯಿಂದ  ಮಾವು ಮೇಳ

- ರಾಜ ಮಾವಿನಲ್ಲಿ ಎಷ್ಟು ವೆರೈಟಿಗಳಿವೆಯೋ ಅಷ್ಟೂ ವೆರೈಟಿಗಳು  ಲಭ್ಯ

- ಮಾವುಮೇಳದಲ್ಲಿ 11 ವೆರೈಟಿಯ ಮಾವುಗಳು, ಖರೀದಿಗೆ ಮುಗಿಬಿದ್ದ ಜನ

ಮಾವು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲಾ ಹೇಳಿ, ಆದ್ರೆ ಎಲ್ಲಾ ಕಡೆಗಳಲ್ಲಿ ಎಲ್ಲಾ ವೆರೈಟಿಯ ಮಾವುಗಳು ಸಿಗೋದು ಕಷ್ಟ. ಅದ್ರಲ್ಲೂ ಕೊಡಗಿನಂತಹ ಗುಡ್ಡಗಾಡಿನಲ್ಲಿ ವಿವಿಧ ತಳಿಯ ಮಾವುಗಳು ಸಿಗೋದು ಬಹಳ ಕಷ್ಟ. ಹಾಗಾಗಿಯೇ ಮಡಿಕೇರಿಯಲ್ಲಿ (Madikeri) ಇದೇ ಮೊದಲ ಬಾರಿಗೆ ಮಾವು ಮೇಳ (Mango Fest) ಆಯೋಜಿಸಲಾಗಿದೆ.

ಮಾವು ಪ್ರಿಯರೇ ಇಲ್ ಕೇಳಿ, ವರ್ಷಪೂರ್ತಿ ಮಾವು ತಿನ್ನಬೇಕೆಂದರೆ ಹೀಗ್ ಮಾಡಿ

ಅಲ್ಫೋನ್ಸೋ... ಮಲ್ಲಿಕಾ, ರಸಪುರಿ, ಮಲ್ಗೋವಾ, ಬಾದಮಿ. ಏಲಕ್ಕಿ ತೋತಾಪುರಿ... ಅಬ್ಬಬ್ಬಾ ಒಂದೋ ಎರಡಾ... ಹಣ್ಣುಗಳ ರಾಜ ಮಾವಿನಲ್ಲಿ ಎಷ್ಟು ವೆರೈಟಿಗಳಿವೆಯೋ ಅಷ್ಟೂ ವೆರೈಟಿಗಳು ಇದೀಗ ಮಡಿಕೇರಿಯಲ್ಲಿ ಸಿಗ್ತಾ ಇವೆ. ಇಲ್ಲಿನ ತೋಟಗಾರಿಕಾ ಇಲಾಖೆ ಮತ್ತು ಹಾಪ್ ಕಾಮ್ಸ್ ವತಿಯಿಂದ ಮಡಿಕೇರಿ ನಗರದಲ್ಲಿ ಮಾವು ಮೇಳ ಆಯೋಜಿಸಲಾಗಿದೆ. ಮೈಸೂರು, ಮಂಡ್ಯ, ರಾಮನಗರ, ಮಾಗಡಿ ಸೇರಿದಂತೆ ರಾಜ್ಯದ ವಿವಿಧಡೆಗಳಿಂದ ಮಾವು ಬೆಳೆಗಾರರು  ಮಡಿಕೇರಿಗೆ ಆಗಮಿಸಿ ಮಾವು ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಮೇಳಕ್ಕೆ ಜನರ ಪ್ರತಿಕ್ರಿಯೆ ನೋಡಿ ಖುಷಿ ಪಟ್ಟಿದ್ದಾರೆ. ನಾಲ್ಕು ದಿನಗಳ ಮೇಳದಲ್ಲಿ ಸಂತೃಪ್ತಿಯಾಗುವಷ್ಟು ಮಾವು ಮಾರಾಟ ಮಾಡಿದ್ದಾರೆ. ಅದ್ರಲ್ಲೂ ನೈಸರ್ಗಿಕವಾಗಿ ಹಣ್ಣು ಮಾಡಿದ ಮಾವುಗಳನ್ನೇ ಮಾರಾಟ ಮಾಡುತ್ತಿರುವುದಾಗಿ ಹೇಳುತ್ತಾರೆ.

Health Tips: ಮಾವು ತಿನ್ನುವ ಮೊದಲು 30 ನಿಮಿಷ ನೀರಿನಲ್ಲಿ ನೆನಸಿಟ್ಟು ನೋಡಿ

ಇನ್ನು ಮಡಿಕೇರಿ ಜನರಿಗೂ ಮಾವು ಮೇಳ ಸಾಕಷ್ಟು ಖುಷಿ ನೀಡಿದೆ. ಸಾಮಾನ್ಯವಾಗಿ ಇಷ್ಟೊಂದು ವೆರೈಟಿಗಳು ಒಮದೇ ಕಡೆ ಇದುವರೆಗೆ ಸಿಕ್ಕಿರಲಿಲ್ಲ. ಮೈಸೂರು ಕಡೆ ತೆರಳಿದಾಗ ಮಾತ್ರ ಜನರು ಹನ್ಣುಗಳನ್ನು ಕೊಂಡು ತರುತ್ತಿದ್ದರು. ಆದ್ರೆ ಇದೀಗ ಮಡಿಕೇರಿ ನಗರದಲ್ಲಿ 11 ವೆರೈಟಿಯ ಮಾವುಗಳು ಸಿಗ್ತಾ ಇರೋದು ಇವರ ಬಾಯಿ ಋಚಿ ತಣಿಸಿದೆ.  ಸ್ಥಳೀಯರು ಮಾತ್ರವಲ್ಲದೆ ಮಡಿಕೇರಿಗೆ ಆಗಮಿಸ್ತಾ ಇರೋ ಪ್ರವಾಸಿಗರು ಕೂಡ ಮಾವು ಖರೀದಿಸಿ ಸವಿಯುತ್ತಿದ್ದಾರೆ.  

Video Top Stories