ಶಿವಮೊಗ್ಗ: ಮಾರಿ ಹಬ್ಬಕ್ಕೆ ಪೆಂಡಾಲ್ ಹಾಕುವ ವಿಚಾರದಲ್ಲಿ ಗುಂಪು ಘರ್ಷಣೆ
ಊರ ಮಾರಿ ಹಬ್ಬದ ಪ್ರಯುಕ್ತ ಪೆಂಡಾಲ್ ಹಾಕುವ ವಿಷಯದಲ್ಲಿ ಎರಡು ಗುಂಪಿನ ನಡುವೆ ವಾಗ್ವಾದ ನಡೆದು ಪೋಲಿಸರ ಸಮ್ಮುಖದಲ್ಲಿ ವಿವಾದಕ್ಕೆ ತಾತ್ಕಾಲಿಕ ತೆರೆಬಿದ್ದಿದೆ. ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಎರಡು ಗುಂಪಿನ ನಡುವೆ ವಾಗ್ವಾದ ನಡೆದಿದೆ.
ಶಿವಮೊಗ್ಗ(ಡಿ.15) ಊರ ಮಾರಿ ಹಬ್ಬದ ಪ್ರಯುಕ್ತ ಪೆಂಡಾಲ್ ಹಾಕುವ ವಿಷಯದಲ್ಲಿ ಎರಡು ಗುಂಪಿನ ನಡುವೆ ವಾಗ್ವಾದ ನಡೆದು ಪೋಲಿಸರ ಸಮ್ಮುಖದಲ್ಲಿ ವಿವಾದಕ್ಕೆ ತಾತ್ಕಾಲಿಕ ತೆರೆಬಿದ್ದಿದೆ. ಶಿವಮೊಗ್ಗ ತಾಲೂಕಿನ ಹಾರನಹಳ್ಳಿ ಗ್ರಾಮದಲ್ಲಿ ಎರಡು ಗುಂಪಿನ ನಡುವೆ ವಾಗ್ವಾದ ನಡೆದಿದೆ.
ಘಟನಾ ಸ್ಥಳಕ್ಕೆ ಶಾಸಕ ಕೆ.ಬಿ.ಅಶೋಕ್ ನಾಯ್ಕ್, ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು, ತಹಶೀಲ್ದಾರ್ ಗಿರೀಶ್ ಧಾವಿಸಿದ್ದು, ತಹಶೀಲ್ದಾರ್ ನೇತೃತ್ವದಲ್ಲಿ ನಾಳೆ ಶಾಂತಿ ಸಭೆ ನಡೆಯಲಿದೆ. ಡಿ.31 ರಂದು ಹಾರನಹಳ್ಳಿಯಲ್ಲಿ ಮಾರಿ ಹಬ್ಬಕ್ಕೆ ಸಿದ್ದತೆ ನಡೆಯುತ್ತಿದ್ದು, ಮಾರಿ ಹಬ್ಬದ ಸಮಿತಿಯ ರಾಜಾ ರಾವ್ ನೇತೃತ್ವದಲ್ಲಿ ಗ್ರಾಮಸ್ಥರು ಸೇರಿಕೊಂಡು ಇಂದು ಪೂಜೆ ನಡೆಸಿ ಪೆಂಡಾಲ್ ಹಾಕಲು ಮುಂದಾದಾಗ ಶೇಕ್ ಅಹ್ಮದ್ ಕುಟುಂಬದ ಸದಸ್ಯರು ತಡೆದಿದ್ದಾರೆ. ಇಲ್ಲಿ ಪೆಂಡಾಲ್ ಹಾಕಬೇಡಿ ನ್ಯಾಯಾಲಯದ ಸ್ಟೇ ಇದೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಕಳುವಾದ ಮೊಬೈಲ್ ದುಬೈನಲ್ಲಿ ಪತ್ತೆ
ಇದು ಎರಡು ಗುಂಪಿನ ನಡುವೆ ಮಾತಿನ ಚಕಮಕಿ ಪರಸ್ಪರ ಕೈ ಕೈ ಮಿಲಾವಣೆವರೆಗೂ ಮುಂದುವರಿದ ಹಿನ್ನೆಲೆಯಲ್ಲಿ ಘಟನೆ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್, ಶಾಸಕ ಕೆ.ಬಿ.ಅಶೋಕ್ ನಾಯ್ಕ್, ತಹಶೀಲ್ದಾರ್ ಗಿರೀಶ್, ಮತ್ತಿತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಸೂಚನೆ ಮೇರೆಗೆ ನಾಳೆ ಮದ್ಯಾಹ್ನ 3 ಗಂಟೆಗೆ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ಎರಡು ಗುಂಪಿನ ನಡುವೆ ಶಾಂತಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಅಲ್ಲಿಯವರೆಗೂ ಪೆಂಡಾಲ್ ಹಾಕದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಈ ಘಟನೆಯಿಂದ ಕೆಲಕಾಲ ಬಿಗುವಿನ ವಾತಾವರಣ ಉಂಟಾಗಿತ್ತು.