Asianet Suvarna News Asianet Suvarna News

ಬಿಗ್‌ 3 ಇಂಪ್ಯಾಕ್ಟ್‌: ಹತ್ತಾರು ವರ್ಷಗಳಿಂದ ಆಗದ ಕೆಲಸ 11 ತಿಂಗಳಲ್ಲಿ ಕಂಪ್ಲೀಟ್‌..!

ಸಣ್ಣಪುಟ್ಟ ಮಕ್ಕಳು ಸೇರಿದಂತೆ ಸುಮಾರು 8ಕ್ಕೂ ಹೆಚ್ಚು ಜನರನ್ನ ಬಲಿ ಪಡೆದಿದ್ದ ಡೆಡ್ಲಿ ಬಾವಿ| ವಿಜಯಪುರ ನಗರದಲ್ಲಿರುವ  ಪೇಟಿಬಾವಡಿಯಲ್ಲಿರುವ ಬಾವಿ| 11 ತಿಂಗಳ ಹಿಂದೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3ಯಲ್ಲಿ ವರದಿ ಪ್ರಸಾರ| ಡೆಡ್ಲಿ ಬಾವಿಯ ಸುತ್ತ ಕಬ್ಬಿಣದ ಕಾಂಪೌಂಡ್‌ ನಿರ್ಮಾಣ| 

First Published Dec 23, 2020, 1:10 PM IST | Last Updated Dec 23, 2020, 1:12 PM IST

ವಿಜಯಪುರ(ಡಿ.23): ನಗರದ ಪೇಟಿಬಾವಡಿಯಲ್ಲಿರುವ ಬಾವಿಯಲ್ಲಿ ಸಣ್ಣಪುಟ್ಟ ಮಕ್ಕಳು ಸೇರಿದಂತೆ ಸುಮಾರು 8ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಬಾವಿಯ ಸುತ್ತ ಇರುವ ಮನೆ ಯಾವ ಕ್ಷಣದಲ್ಲಾದರೂ ಕುಸಿದು ಬಿದ್ದು ಜನರ ಜೀವ ಹಾರಿಹೋಗಬಹುದಿತ್ತು. 

ಬಳ್ಳಾರಿಯಲ್ಲಿ ಹಾವಿನ ಆಕಾರದ ತೆಂಗಿನ ಗರಿ... ಜೆಸಿಬಿಯಿಂದ ಹಾವು ಕೊಂದಿದ್ದರು!

ಈ ಬಗ್ಗೆ 11 ತಿಂಗಳ ಹಿಂದೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3ಯಲ್ಲಿ ವರದಿ ಪ್ರಸಾರ ಮಾಡಿತ್ತು. ವರದಿಯ ಬಳಿಕ ನಿರಂತರವಾವಿ ಫಾಲೋಅಪ್‌ ಕೂಡ ಮಾಡಿತ್ತು.  ಇದೀಗ ಈ ಡೆಡ್ಲಿ ಬಾವಿಯ ಸುತ್ತ ಕಬ್ಬಿಣದ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಇಲ್ಲಿನ ಜನತೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ಧನ್ಯವಾದಗಳನ್ನ ತಿಳಿಸಿದ್ದಾರೆ. 
 

Video Top Stories