‘ನಾನು ಯಾರಿಗೇನು ಕಮ್ಮಿ ಇಲ್ಲ, ಹೊಲದಲ್ಲೂ ಪ್ರಚಾರ ಮಾಡ್ತೇನೆ’

ಬಳ್ಳಾರಿ[ನ.29]: ವಿಜಯನಗರ ಉಪಚುನಾವಣೆಯಲ್ಲಿ ಮತದಾರನ್ನು ಸೆಳೆಯಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರುಗಳು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಇವರೆಲ್ಲರ ಮಧ್ಯೆ ನಾನೇನು ಕಡಿಮೆ ಇಲ್ಲ ಎಂಬಂತೆ ಪಕ್ಷೇತರ ಅಭ್ಯರ್ಥಿ ಕಿಚಿಡಿ ಕೊಟ್ರೇಶ್ ಅವರು ವಿನೂತನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. 

ಕಿಚಿಡಿ ಕೊಟ್ರೇಶ್ ಮೆಣಸಿನಕಾಯಿ ಹೊಲಗಳಿಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.  ತಾಲೂಕಿನ ನಲ್ಲಾಪುರ ಗ್ರಾಮದ  ಹೊಲದಲ್ಲಿ ಮೆಣಸಿನಕಾಯಿ ಬಿಡಿಸುತ್ತಿರುವ ಕೆಲಸಗಾರರ ಮುಂದೆ ಕಿಚಿಡಿ ಕೊಟ್ರೇಶ್ ಅವರು ಭಾಷಣ ಮಾಡಿ ಕ್ಷೇತ್ರ ಅಭಿವೃದ್ಧಿಗೆ ತಮಗೆ ಮತ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಮಹಿಳೆಯರು ಕೆಲಸ ಮಾಡುತ್ತಲೇ ಕಿಚಿಡಿ ಕೊಟ್ರೇಶ್  ಅವರ ಮಾತುಗಳನ್ನು ಕೇಳಿದ್ದಾರೆ. ತಮ್ಮ ಗುರುತು ಬ್ಯಾಟರಿ ಟಾರ್ಚ್ ಗುರುತಿಗೆ ತಮ್ಮ ಅಮೂಲ್ಯವಾದ ಮತ ನೀಡಿ ಆರಿಸಿ ತರಬೇಕು ಎಂದು ಮನವಿ ಮಾಡಿದ್ದಾರೆ. 

First Published Nov 29, 2019, 10:39 AM IST | Last Updated Nov 29, 2019, 10:40 AM IST

ಬಳ್ಳಾರಿ[ನ.29]: ವಿಜಯನಗರ ಉಪಚುನಾವಣೆಯಲ್ಲಿ ಮತದಾರನ್ನು ಸೆಳೆಯಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರುಗಳು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಇವರೆಲ್ಲರ ಮಧ್ಯೆ ನಾನೇನು ಕಡಿಮೆ ಇಲ್ಲ ಎಂಬಂತೆ ಪಕ್ಷೇತರ ಅಭ್ಯರ್ಥಿ ಕಿಚಿಡಿ ಕೊಟ್ರೇಶ್ ಅವರು ವಿನೂತನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. 

ಕಿಚಿಡಿ ಕೊಟ್ರೇಶ್ ಮೆಣಸಿನಕಾಯಿ ಹೊಲಗಳಿಗೆ ಹೋಗಿ ಮತಯಾಚನೆ ಮಾಡುತ್ತಿದ್ದಾರೆ.  ತಾಲೂಕಿನ ನಲ್ಲಾಪುರ ಗ್ರಾಮದ  ಹೊಲದಲ್ಲಿ ಮೆಣಸಿನಕಾಯಿ ಬಿಡಿಸುತ್ತಿರುವ ಕೆಲಸಗಾರರ ಮುಂದೆ ಕಿಚಿಡಿ ಕೊಟ್ರೇಶ್ ಅವರು ಭಾಷಣ ಮಾಡಿ ಕ್ಷೇತ್ರ ಅಭಿವೃದ್ಧಿಗೆ ತಮಗೆ ಮತ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಮಹಿಳೆಯರು ಕೆಲಸ ಮಾಡುತ್ತಲೇ ಕಿಚಿಡಿ ಕೊಟ್ರೇಶ್  ಅವರ ಮಾತುಗಳನ್ನು ಕೇಳಿದ್ದಾರೆ.