Big 3: ಮಹಿಳೆಯರ ರಕ್ಷಣೆಗಾಗಿ ಸ್ಮಾರ್ಟ್ ಚಪ್ಪಲಿ ತಯಾರಿಸಿದ ಕಲಬುರಗಿಯ ವಿಜಯಲಕ್ಷ್ಮೀ ಬಿರಾದಾರ...

ಇತ್ತಿಚಿಗೆ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿರುವ ಕಾರಣಕ್ಕಾಗಿ ಕಲಬುರಗಿಯ 10 ನೇ ತರಗತಿಯ ವಿದ್ಯಾರ್ಥಿನಿ ಸ್ಮಾರ್ಟ್ ಚಪ್ಪಲಿಗಳನ್ನು ಸಂಶೋಧನೆ ಮಾಡಿದ್ದಾಳೆ. 
 

First Published Dec 10, 2022, 1:22 PM IST | Last Updated Dec 10, 2022, 1:22 PM IST

ಸ್ಮಾರ್ಟ್ ಚಪ್ಪಲಿಗಳು ಯಾರಾದ್ರೂ ದುಷ್ಟರು ಒಂಟಿ ಮಹಿಳೆ ಅಂತ ಚುಡಾಯಿಸಲು ಇಲ್ಲವೇ ದೌರ್ಜನ್ಯ ನಡೆಸಲು ಮುಂದಾದ್ರೆ ಮಹಿಳೆಯ ನೆರವಿಗೆ ಬರುತ್ತವೆ. ಕಿರುಕುಳ ನೀಡುತ್ತಿರುವ ದುಷ್ಟನಿಗೆ ಕರೆಂಟ್ ಶಾಕ್ ಕೊಟ್ಟು ಆತನನ್ನು ಕಕ್ಕಾ ಬಿಕ್ಕಿಯಾಗಿ ಮಾಡಿ ಬಿಡಬಿಡುವಷ್ಟು ಸ್ಮಾರ್ಟ್ ಈ ಚಪ್ಪಲಿಗಳು. ಅಂದ ಹಾಗೆ ಈ ಸ್ಮಾರ್ಟ ಚಪ್ಪಲಿಗಳನ್ನು ಸಂಶೋಧಿಸಿದ್ದು ಕಲಬುರಗಿಯ ಎಸ್.ಆರ್.ಎನ್ ಮೆಹತಾ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿ ವಿಜಯಲಕ್ಷ್ಮೀ ಬಿರಾದಾರ. ಮಹಿಳೆಯರ ಸುರಕ್ಷತೆಗಾಗಿಯೇ ಸಿದ್ದಪಡಿಸಿರುವ "ಆ್ಯಂಟಿ ರೇಪ್ ಫುಟ್ ವೇರ್ " ಸಂಶೋಧನೆ ದೇಶದಲ್ಲಿಯೇ ಮೊದಲನೆಯದ್ದು ಎನ್ನಲಾಗಿದೆ. ಈ ವಿಶಿಷ್ಟ ಚಪ್ಪಲಿ ಧರಿಸಿದ ಮಹಿಳೆಯ ಮೇಲೆ ಯಾರಾದ್ರೂ ದೌರ್ಜನ್ಯ ಎಸಗಲು ಯತ್ನಿಸಿದರೆ, ಈ ಸಂದರ್ಭದಲ್ಲಿ ಚಪ್ಪಲಿಯ ಹೆಬ್ಬೆರಳಿನ ಅಡಿಯಲ್ಲಿ ಚಿಕ್ಕದಾದ ಗುಂಡಿ ಇದ್ದು, ಆ ಮಹಿಳೆ ತನ್ನ ಕಾಲ ಬೆರಳಿನಿಂದ ಗುಂಡು ಅದುಮಿದರೆ ಸಾಕು, 0.5 ಆಂಪಿಯರ್ ನಷ್ಟು ವಿದ್ಯುತ್ ಉತ್ಪತ್ತಿಯಾಗಿ ಮೈ ಮುಟ್ಟಿದನಿಗೆ ಕರೆಂಟ್ ಶಾಕ್ ಹೊಡೆಯುತ್ತದೆ. ಆತ ಕರೆಂಟ್ ಹೊಡೆಸಿಕೊಂಡ ಕಾಗೆಯಂತೆ ಕಕ್ಕಾಬಿಕ್ಕಿಯಾದ ಸಂದರ್ಭ ಬಳಸಿಕೊಂಡು ಮಹಿಳೆ ಅಲ್ಲಿಂದ ತಪ್ಪಿಸಿಕೊಳ್ಳಬಹುದು. 

ಬುಡಕಟ್ಟು ಜನಾಂಗದವರಿಗೆ ಮನೆ, ಜಮೀನು ಪಹಣಿ ವ್ಯವಸ್ಥೆ: ಶ್ರೀರಾಮುಲು