ಕಾರವಾರ: ಕೊರೋನಾ 4 ನೇ ಅಲೆ ಭೀತಿ, ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮ
ಉಸ್ಸಪ್ಪಾ ...ಸಾಕಾಯ್ತು ಈ ಕೊರೊನಾ ಕಾಟ ಅನ್ನೋವಾಗ್ಲೇ ಇದೀಗ ಮತ್ತೆ ಕೊರೊನಾ ನಾಲ್ಕನೇ ಅಲೆಯ (Covid 19) ರೂಪದಲ್ಲಿ ಕಾಡುವ ಭೀತಿ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ (Bengaluru) ಮತ್ತೆ ಕೊರೊನಾ ಪ್ರಕರಣಗಳು ಕಾಣಿಸಿರುವ ಹಿನ್ನೆಲೆ ರಾಜ್ಯ ಸರ್ಕಾರ ಕೋವಿಡ್ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಿದೆ.
ಉಸ್ಸಪ್ಪಾ ...ಸಾಕಾಯ್ತು ಈ ಕೊರೊನಾ ಕಾಟ ಅನ್ನೋವಾಗ್ಲೇ ಇದೀಗ ಮತ್ತೆ ಕೊರೊನಾ ನಾಲ್ಕನೇ ಅಲೆಯ (Covid 19) ರೂಪದಲ್ಲಿ ಕಾಡುವ ಭೀತಿ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ (Bengaluru) ಮತ್ತೆ ಕೊರೊನಾ ಪ್ರಕರಣಗಳು ಕಾಣಿಸಿರುವ ಹಿನ್ನೆಲೆ ರಾಜ್ಯ ಸರ್ಕಾರ ಕೋವಿಡ್ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚಿಸಿದೆ. ಆದರೆ, ಜನರು ಮಾತ್ರ ಕ್ಯಾರೇ ಅನ್ನದೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಉತ್ತರಕನ್ನಡ (Uttara Kannada) ಜಿಲ್ಲೆಯಲ್ಲೂ ಜನರು ಕೋವಿಡ್ ನಿಯಮ ಪಾಲನೆ ಮಾಡದೇ ಬೇಕಾಬಿಟ್ಟಿ ಓಡಾಡುತ್ತಿದ್ದು, ಕೊರೊನಾ ಸೋಂಕನ್ನು ಮತ್ತೆ ಆಹ್ವಾನಿಸುವಂತಿದೆ.
ಈಗಾಗಲೇ ಕೊರೊನಾ ಸೋಂಕು ಬೆಂಗಳೂರಿಗೆ (Bengaluru) ಪ್ರವೇಶ ಮಾಡಿದೆಯಾದ್ರೂ, ತಜ್ಞರ ಮಾಹಿತಿ ಪ್ರಕಾರ ಜೂನ್-ಜುಲೈ ತಿಂಗಳಲ್ಲಿ ನಾಲ್ಕನೇ ಅಲೆ ಮತ್ತೆ ವಕ್ಕರಿಸುವ ಸಾಧ್ಯತೆಯಿದೆ. ಜನರು ಮಾತ್ರ ಇದಕ್ಕೆ ಕ್ಯಾರೇ ಮಾಡದೆ ತಿರುಗಾಡುತ್ತಿದ್ದಾರೆ. ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಉತ್ತರಕನ್ನಡ ಜಿಲ್ಲೆಗೆ ಸಾಕಷ್ಟು ವಿವಿಧೆಡೆಯಿಂದ ಆಗಮಿಸುತ್ತಿದ್ದರೂ, ಜನರು ಕೋವಿಡ್ ನಿಮಯ ಪಾಲಿಸದೆ ತಮಗೆ ಬೇಕಾದಂತೆ ಓಡಾಡುತ್ತಿದ್ದಾರೆ. ಕೊನೇ ಪಕ್ಷ ಮಾಸ್ಕ್ ಕೂಡಾ ಧರಿಸದೇ ಜನರು ಮಾರುಕಟ್ಟೆಯಲ್ಲಿ, ಬೀಚ್‌ಗಳಲ್ಲಿ ಗುಂಪು ಗುಂಪಾಗಿ ಓಡಾಡುತ್ತಿದ್ದು ಕೋವಿಡ್ ಸೋಂಕನ್ನು ಮತ್ತೆ ಆಹ್ವಾನಿಸುವಂತಿದೆ.
ಆನೆಕಾಲು ರೋಗದಿಂದ ಉತ್ತರ ಕನ್ನಡ ಮುಕ್ತ, 2017 ರ ನಂತರ ನೂತನ ಪ್ರಕರಣಗಳಿಲ್ಲ..!
ಇನ್ನು ಈಗಾಗಲೇ ಜಿಲ್ಲೆಯಲ್ಲಿ 1, 2 ಮತ್ತು 3 ನೇ ಅಲೆಯಲ್ಲಿ ಸುಮಾರು 70858 ಜನ್ರಿಗೆ ಸೋಂಕು ತಗುಲಿದ್ದು, ಅದರ ಪೈಕಿ 823 ಜನರನ್ನು ಕೊರೊನಾ ಆಹುತಿ ಪಡೆದುಕೊಂಡಿದೆ. ಉಳಿದವರು ಕೋವಿಡ್ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ. ಹೀಗಾಗಿ ಮತ್ತೆ ಅನಾಹುತ ಎದುರಿಸುವ ಮುನ್ನವೇ ಜನರು ಎಚ್ಚೆತ್ತುಕೊಂಡು ಕೋವಿಡ್ ನಿಯಮ ಪಾಲನೆ ಜತೆಗೆ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕಿದೆ. ನಾಲ್ಕನೇ ಅಲೆಯು ಚಿಕ್ಕ ಮಕ್ಕಳು ಹಾಗೂ ವೃದ್ಧರನ್ನು ಟಾರ್ಗೆಟ್ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದು, ಇದಕ್ಕೆ ವ್ಯಾಕ್ಸಿನ್ ಪಡೆಯುವುದೇ ಸೂಕ್ತ ಮದ್ದು. ಆದ್ದರಿಂದ ಸೆಕೆಂಡ್ ಡೋಸ್ ಪಡೆಯದವರು ಶೀಘ್ರದಲ್ಲಿ ಪಡೆಯಬೇಕೆಂದು ಹೇಳ್ತಿದ್ದಾರೆ ಅಧಿಕಾರಿಗಳು.
ಇನ್ನು ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಮೊದಲ ಡೋಸ್ ಅನ್ನು ಶೇಕಡಾ 99.5% ಜನರು ಪಡೆದುಕೊಂಡಿದ್ದರೆ, ಸೆಕೆಂಡ್ ಡೋಸ್ ಹಾಕಿಕೊಂಡವರು ಶೇ. 85-90% ಮಾತ್ರ. ಇನ್ನೂ ಕೆಲವರು ವಿದ್ಯಾರ್ಥಿಗಳು ಹಾಗೂ ಹಿರಿಯರು ಕೂಡಾ ಸೆಕೆಂಡ್ ಡೋಸ್ ಪಡೆಯದೇ ಬಾಕಿಯಿದ್ದಾರೆ. ವ್ಯಾಕ್ಸಿನ್ ಪಡೆಯಲು ಬಾಕಿಯಿರುವ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗಂತೂ ಮತ್ತೆ ವ್ಯಾಕ್ಸಿನ್ ವಿತರಣೆ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದ್ದು, ಉಳಿದವರು ಕೂಡಾ ನಿಷ್ಕಾಳಜಿ ಮಾಡದೆ ಎಲ್ಲರೂ ಸೆಕೆಂಡ್ ಡೋಸ್‌ನೊಂದಿಗೆ ಬೂಸ್ಟರ್ ಡೋಸ್ ಕೂಡಾ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಸಾರ್ವಜನಿಕ ಕುಂದುಕೊರತೆ ಪರಿಹರಿಸಲು ಉತ್ತರ ಕನ್ನಡ ಡಿಸಿಯಿಂದ ಹೊಸ ಜನಪರ ಕಾರ್ಯಕ್ರಮ
ಈಗಾಗಲೇ ಸಾಕಷ್ಟು ಜನರು ಕೊರೊನಾ ಕಾಟಕ್ಕೆ ಒಳಗಾಗಿ ನರಳಿ ಸಾವನ್ನು ಗೆದ್ದುಕೊಂಡು ಬಂದಿದ್ದಾರೆ. ಮತ್ತೆ ಜನರು ಈ ಸ್ಥಿತಿಯನ್ನು ಎದುರಿಸೋದು ಬೇಡವೆಂದ್ರೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ಮಾಸ್ಕ್ ಧರಿಸಿ ತಮ್ಮ ಸುರಕ್ಷತೆ ಮಾಡಿಕೊಳ್ಳಬೇಕಿದೆ. ಇನ್ನು ಈ ಬಗ್ಗೆ ಜನ್ರನ್ನು ಕೇಳಿದ್ರೆ, ಕೋವಿಡ್ ಬಗ್ಗೆ ನಮಗೆ ಭಯಾನೂ ಇದೆ, ಎಚ್ಚರಿಕೆ ಕೂಡಾ ಇದೆ. ಇನ್ನು ಮುಂದಕ್ಕೆ ಜಾಗ್ರತೆ ಮಾಡಿಕೊಂಡು ಮಾಸ್ಕ್ ಹಾಕಿ ಓಡಾಡುತ್ತೇವೆ. ಆದರೆ, ನಮ್ಮ ಜಿಲ್ಲೆಯಲ್ಲಿ ಕೋವಿಡ್ ಕೇಸ್ ಪತ್ತೆಯಾಗದ ಕಾರಣ ಜನರಲ್ಲಿ ಸ್ವಲ್ಪ ನಿರ್ಲಕ್ಷ್ಯವಿದೆ. ಆದ್ರೆ, ಜನರೆಲ್ಲರೂ ಕೊರೊನಾ ಮತ್ತೆ ಆಹ್ವಾನಿಸದಂತೆ ಎಚ್ಚೆತ್ತುಕೊಳ್ಳಬೇಕಿದೆ ಅಂತಾರೆ.