Asianet Suvarna News Asianet Suvarna News

ಹಾವೇರಿ: ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಿಂದ ಸಿಎಂ ನಿವಾಸದವರೆಗೆ ಪಾದಯಾತ್ರೆ

ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದರೆ ವೈದರೊಬ್ಬರು ಗರ್ಭಕೋಶ ಶಸ್ತ್ರಚಿಕಿತ್ಸೆ (Uterus Operation) ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯರು (Women) ನಿನ್ನೆಯಿಂದ (ಏಪ್ರಿಲ್ 25) ಪಾದಯಾತ್ರೆ ನಡೆಸುತ್ತಿದ್ದಾರೆ.

ಹಾವೇರಿ, (ಏ.26): ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದರೆ ವೈದರೊಬ್ಬರು ಗರ್ಭಕೋಶ ಶಸ್ತ್ರಚಿಕಿತ್ಸೆ (Uterus Operation) ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯರು (Women) ನಿನ್ನೆಯಿಂದ (ಏಪ್ರಿಲ್ 25) ಪಾದಯಾತ್ರೆ ನಡೆಸುತ್ತಿದ್ದಾರೆ.

ಸುಡುಬಿಸಿಲಿನಲ್ಲಿ ಶಿಗ್ಗಾವಿಯ ಸಿಎಂ ಮನೆವರೆಗೂ ಪಾದಯಾತ್ರೆ ಕೈಗೊಂಡ ಮಹಿಳೆಯರು

ರಾಣೆಬೆನ್ನೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಡಾ.ಪಿ.ಶಾಂತ 1,522 ಮಹಿಳೆಯರಿಗೆ ಗರ್ಭಕೋಶ ಶಸ್ತ್ರಚಿಕಿತ್ಸೆ ಚಿಕಿತ್ಸೆ ಮಾಡಿದ್ದಾರಂತೆ. ನಂತರ ಹಲವು ರೀತಿಯ ತೊಂದರೆಗೆ ಸಿಲುಕಿದ ಮಹಿಳೆಯರು ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಹೋರಾಟ ಮಾಡುತ್ತಿದ್ದಾರೆ. ಬಿಸಿಲನ್ನೂ ಲೆಕ್ಕಿಸದೆ ತಲೆ ಮೇಲೆ ಬಟ್ಟೆ, ಊಟದ ಗಂಟು ಇಟ್ಕೊಂಡು ಸಿಎಂ ಮನೆಗೆ ಮಹಿಳೆಯರ ದಂಡು ಪಾದಯಾತ್ರೆ ಹೊರಟಿದೆ.

Video Top Stories