Asianet Suvarna News Asianet Suvarna News

ಮಂಡ್ಯದಲ್ಲಿ ದರ್ಗಾ ಆಗಿದ್ದ ಸರ್ಕಾರಿ ಶಾಲೆ : ತೆರವು ಮಾಡಿದ ಅಧಿಕಾರಿಗಳು

Sep 23, 2021, 3:34 PM IST

 ಮಂಡ್ಯ (ಸೆ.23): ಮಂಡ್ಯದ ಕೆಆರ್‌ ಪೇಟೆಯಲ್ಲಿ ಮಕ್ಕಳ ಕೊರತೆಯಿಂದ ಮುಚ್ಚಿಹೋಗಿದ್ದ ಸರ್ಕಾರಿ ಉರ್ದು ಶಾಲೆಯನ್ನು ಅಕ್ರಮವಾಗಿ ಧಾರ್ಮಿಕ ಚಟುವಟಿಕೆಗಳ ಕೇಂದ್ರವನ್ನಾಗಿಸಿಕೊಂಡಿದ್ದು, ಇದೀಗ ತೆರವು ಮಾಡಲಾಗಿದೆ. 

ರಾಜ್ಯದ ಮಸೀದಿ, ದರ್ಗಾದಲ್ಲಿ ಧ್ವನಿವರ್ಧಕ ನಿರ್ಬಂಧ.. ಮಹತ್ವದ ಸುತ್ತೋಲೆ

ಇಲ್ಲಿನ ಸಂತೆ ಬಾಚಹಳ್ಳಿಯಲ್ಲಿ  ಮಸೀದಿ ಸಮೀಪದ ಶಾಲೆ 45 ವರ್ಷದ ಹಿಂದೆ ನಿರ್ಮಾಣವಾಗಿದ್ದ ಶಾಲೆಯನ್ನು ದರ್ಗಾ ಮಾಡಿಕೊಳ್ಳಲಾಗಿತ್ತು.  ಸ್ಥಳಕ್ಕೆ ತಹಶೀಲ್ದಾರ್ ಶಿವಮೂರ್ತಿ ಹಾಗು ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ತೆರವು ಮಾಡಿದ್ದಾರೆ. ಸುವರ್ಣ ನ್ಯೂಸ್ ವರದಿ ಬಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.