Asianet Suvarna News Asianet Suvarna News

Karnataka Tourism: ವರವಾಯ್ತು ಮಳೆ, ಇಳೆಗೆ ಕಳೆ; ಹಸಿರಿನಿಂದ ಕಂಗೊಳಿಸುತ್ತಿದೆ ಬಂಡೀಪುರ

- ಭಾರೀ ಅವಾಂತರ ಸೃಷ್ಟಿಸಿರುವ ಅಕಾಲಿಕ ಮಳೆ

- ಮತ್ತೊಂದು ಕಡೆ ಜೀವ ವೈವಿಧ್ಯಕ್ಕೆ ವರವಾಯ್ತು ಸೈಕ್ಲೋನ್!

- ಹಚ್ಚ ಹಸಿರಿನಿಂದ ಕಂಗೊಳಿಸ್ತಿರೋ ಬಂಡೀಪುರ, ಬಿಳಿಗಿರಿರಂಗನ ಬೆಟ್ಟ
 

ಚಾಮರಾಜನಗರ (ನ. 27):  ರಾಜ್ಯದಲ್ಲಿ ಸುರಿದ ಅಕಾಲಿಕ ಮಳೆಯಿಂದ (Untimely Rain) ಆಗಿರುವ ಅವಾಂತರ ಅಷ್ಟಿಷ್ಟಲ್ಲ. ಕಟಾವಿಗೆ ಬಂದಿರುವ ಬೆಳೆ (Crop) ಮನೆಗೆ ಬರಲಿಲ್ಲವಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತಿದ್ದಾಳೆ. ಬಂಡೀಪುರ (Bandipura)  ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬಿ.ಆರ್.ಟಿ ಹುಲಿ ರಕ್ಷಿತಾರಣ್ಯಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಉತ್ತಮ ಮಳೆಯಾಗಿರುವ ಪರಿಣಾಮ ಕಾಡಿನೊಳಗಿರುವ ಎಲ್ಲಾ ಕೆರೆಗಳು ತುಂಬಿ ತುಳುಕುತ್ತಿವೆ. ಅದಲ್ಲದೇ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳ ಚಾಮರಾಜನಗರವಾಗಿದ್ದು,ಜಿಲ್ಲೆಯ ಎಲ್ಲಾ ಪ್ರವಾಸಿ ಸ್ಥಳದ ಅಭಿವೃದ್ಧಿ ಮಾಡಲಿ ಅನ್ನೋ ಒತ್ತಾಯ ಕೇಳಿ ಬಂದಿದೆ.

Ancient Temples in Bidar: ಅವಸಾನದ ಅಂಚಿನಲ್ಲಿವೆ ಮೈಲಾರ ಮಲ್ಲಣ್ಣ ದೇವಸ್ಥಾನದ ಹೊಂಡಗಳು

 ಬಂಡೀಪುರ ಹುಲಿರಕ್ಷಿತಾರಣ್ಯ  ಪ್ರವಾಸಿಗರ ಕೇಂದ್ರ ಬಿಂದುವಾಗಿದೆ. ಬಂಡೀಪುರದಲ್ಲಿ ಸಫಾರಿ (Bandipura Safari) ಮಾಡಲೆಂದೆ  ರಾಜ್ಯ ಮತ್ತು ಹೊರ ರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರ ದಂಡೆ ಹರಿದು ಬರುತ್ತಿದೆ. ಆದರೆ ಮಳೆಯ ಕಾರಣ  ಸಫಾರಿ ವೇಳೆ ಹೆಚ್ಚಾಗಿ ಪ್ರಾಣಿಗಳು ಕಂಡು ಬರುತ್ತಿಲ್ಲ. ಆದರೂ ಕಾಡಿನ ಸುಂದರ ನೋಟಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಬಂಡೀಪುರದಲ್ಲಿ 363 ಕೆರೆಗಳಿದ್ದು ನಿರಂತರ ಬಿದ್ದ ಮಳೆಯಿಂದ ಸಂಪೂರ್ಣ ಭರ್ತಿಯಾಗಿವೆ. ಇದರ ಜೊತೆಗೆ ಬಿಳಿಗಿರಿರಂಗನ ಬೆಟ್ಟದ ಎಲ್ಲಾ ಕೆರೆಗಳು ಭರ್ತಿಯಾಗಿದ್ದು,ಈ ಬಾರಿ ನೀರಿನ ಸಮಸ್ಯೆ ಉದ್ಭವವಾಗಲ್ಲ ಅಂತಾರೆ ಅಧಿಕಾರಿಗಳು.

 

Video Top Stories