ಅನಧಿಕೃತ 'ಧಾರ್ಮಿಕ ಶಿಕ್ಷಣ ಸಂಸ್ಥೆ' ಪ್ರಾರಂಭ: ಹಿಂದೂ ಜಾಗರಣ ವೇದಿಕೆ ಕಿಡಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನೆ ಕಟ್ಟಲು ಅನುಮತಿ ಪಡೆದು ಶಿಕ್ಷಣ ಸಂಸ್ಥೆ ಕಟ್ಟಲಾಗಿದ್ದು, ಇದರಿಂದ ಮತ್ತೊಂದು ಧರ್ಮ ದಂಗಲ್‌ ಶುರುವಾಗಿದೆ.
 

First Published Nov 18, 2022, 10:47 AM IST | Last Updated Nov 18, 2022, 10:47 AM IST

ದ.ಕ(ನ 18):ಮೂಡುಬಿದಿರೆ ತಾಲೂಕಿನ ಪ್ರಾಂತ್ಯ ಗ್ರಾಮದಲ್ಲಿ ಅನಧಿಕೃತ ಷರಿಯತ್‌ ಕಾಲೇಜು ಶುರು ಮಾಡಲಾಗಿದ್ದು, ಇದೀಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಅಕ್ರಮ ಧಾರ್ಮಿಕ ಶಿಕ್ಷಣದ ವಿರುದ್ಧ ಹಿಂದೂ ಜಾಗರಣ ವೇದಿಕೆ ಸಿಡಿದೆದ್ದಿದೆ. 600 ಚದರ ಅಡಿ ಮನೆ ನಿರ್ಮಾಣಕ್ಕೆ ಮೂಡಬಿದ್ರೆ ಪುರಸಭೆಯಿಂದ ಅನುಮತಿ ಪಡೆದು, ಅದೇ ಜಾಗದಲ್ಲಿ 4 ಸಾವಿರ ಚದರ ಅಡಿ ಧಾರ್ಮಿಕ ಶಿಕ್ಷಣೆ  ನಿರ್ಮಾಣ ಮಾಡಲಾಗಿದೆ. ಅಲ್‌ ಮಾಫಝ್ ಚಾರಿಟೇಬಲ್‌ ಟ್ರಸ್ಟ್‌ನಿಂದ ಕಾಲೇಜು ಸ್ಥಾಪನೆಯಾಗಿದೆ. ಕರ್ನಾಟಕ ಮುನ್ಸಿಪಲ್ ಕಾಯ್ದೆ ಉಲ್ಲಂಘನೆಯಾಗಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸಿದ ಮೆಸ್ಕಾಂ ವಿರುದ್ದವು ಕೂಡಾ ಆಕ್ರೋಶ ವ್ಯಕ್ತವಾಗುದ್ದು, ಅಕ್ರಮ ಶಿಕ್ಷಣ ವಿರುದ್ಧ ತನಿಖೆ ನಡೆಸಲು ಗೃಹ ಇಲಾಖೆ ಆಗ್ರಹಿಸಲಾಗಿದೆ.

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ ದೋಷಿ: ಉಡುಪಿ ಕೋರ್ಟ್

Video Top Stories