Tumakuru Stone Quarry: ಗಣಿಗಾರಿಕೆ ವಿರುದ್ಧ ಗ್ರಾಮಸ್ಥರಿಂದ ಒಂದು ತಿಂಗಳಿಂದ ಪ್ರತಿಭಟನೆ!

*ಕಲ್ಲು  ಗಣಿಗಾರಿಕೆಯಿಂದ ಗ್ರಾಮದ ಮನೆ, ದೇಗುಲಗಳಲ್ಲಿ ಬಿರುಕು
*ಗಣಿಗಾರಿಕೆ ವಿರುದ್ಧ ಗ್ರಾಮಸ್ಥರಿಂದ ಒಂದು ತಿಂಗಳಿಂದ ಪ್ರತಿಭಟನೆ
*ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಕೋಳಘಟ್ಟದಲ್ಲಿ ಘಟನೆ
*ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಬಂಡೆ ಸ್ಫೋಟ
*ಕಲ್ಲು ಎಸೆಯಲ್ಪಟ್ಟು ಕೃಷಿಕರು, ಕಾರ್ಮಿಕರು, ಜಾನುವಾರುಗಳಿಗೆ ಗಾಯ  

First Published Jan 22, 2022, 12:44 PM IST | Last Updated Jan 22, 2022, 12:44 PM IST

ತುಮಕೂರು (ಜ. 22): ತುಮಕೂರು (Tumakuru) ಜಿಲ್ಲೆ, ತುರುವೇಕರೆ ತಾಲೂಕಿನ ಕೋಳಘಟ್ಟ ಗ್ರಾಮದ ಕಥೆಯಿದು, ಊರಿನ ಸಮೀಪವಿರುವ ಕಲ್ಲುಗಣಿಗಾರಿಕೆಯ ಸ್ಫೋಟವು (Stone Quarry)  ಗ್ರಾಮದ ಜನರನ್ನು ಸಿಡಿದೇಳುವಂತೆ ಮಾಡಿದೆ. ಗ್ರಾಮದ ಸಮೀಪ ಇರುವ ಸರ್ಕಾರದ 10 ಎಕರೆ ಜಾಗದಲ್ಲಿ ಕಲ್ಲುಗಣಿಗಾರಿಕೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಇದು ಕೋಳಘಟ್ಟ ಗ್ರಾಮಸ್ಥರ ನಿದ್ದೆಗೆಡಿಸಿದೆ.  ಈ ಗ್ರಾಮದ ಕಲ್ಲು ಬಂಡೆಯನ್ನು ಸ್ಫೋಟಿಸಿ ಬಳಿಕ ಅಲ್ಲೇ ಜಲ್ಲಿ ಮಾಡಿ ಅದನ್ನು ಶಿವಮೊಗ್ಗ - ಬೆಂಗಳೂರು ಹೆದ್ದಾರಿ ರಸ್ತೆ ನಿರ್ಮಾಣದ ಕಾಮಗಾರಿಗೆ ಬಳಸಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: Chikkaballapura Earthquake : ಭೂ ಕಂಪನದ ಹಿಂದೆ ಗಣಿಗಾರಿಕೆಯ ಕರಿನೆರಳು!

ಈ ಕಲ್ಲು ಬಂಡೆ ಒಡೆಯುವ ಗುತ್ತಿಗೆಯನ್ನು ಎಆರ್‌ಕೆಎಂ ಕಂಪನಿಗೆ ನೀಡಲಾಗಿದೆ. ಈ ಕಂಪನಿಯವರು ಪರವಾನಗಿ ಸಿಕ್ಕ ಬಳಿಕ ಕೋಳಘಟ್ಟ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಬಂಡೆಯನ್ನು ಸ್ಫೋಟಿಸುತ್ತಿದ್ದಾರೆ. ಇದ್ರಿಂದ ಕೃಷಿ ಜಮೀನಿನಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ರೈತರ ತಲೆ ಮೇಲೆ ಕಲ್ಲು ಬೀಳುತ್ತಿವೆ. ಈಗಾಗ್ಲೇ ಜಾನುವಾರುಗಳಿಗೆ ಕಲ್ಲು ತಗುಲಿ ಸಾವನಪ್ಪಿವೆ.  ಅರಣ್ಯ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲ್ಲು ಬಂಡೆ ತೆಗೆಯಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಆದ್ರೆ ಕಂಪನಿಯವರು ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಏಕಾಏಕಿ ಬಂಡೆಯನ್ನು ಸ್ಫೋಟಿಸಿ, ಜನರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.

Video Top Stories