ತುಮಕೂರು ಎಸ್ಪಿ ಮಾದರಿ ನಡೆಗೆ ಸಾರ್ವಜನಿಕರಿಂದ ಪ್ರಶಂಸೆ
- ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯ್ತು ತುಮಕೂರು ಎಸ್ಪಿ ಕಾರ್ಯವೈಖರಿ
- ಎಎಸ್ಐಯಿಂದ ಸಾರ್ವಜನಿಕರಿಗೆ ಕ್ಷಮೆ ಕೇಳಿಸಿದ ಎಸ್ಪಿ ರಾಹುಲ್ ಕುಮಾರ್ ಶಹಾಪುರ್‌ವಾಡ್
- ವ್ಯಕ್ತಿಯೋರ್ವರಿಗೆ ಬೈದು, ಆತನ ಬೈಕನ್ನು ನೆಲಕ್ಕೆ ಉರುಳಿಸಿ ದುರ್ನಡತೆ ತೋರಿದ್ದ ಎಎಸ್ಐ ರಮೇಶ್
ತುಮಕೂರು (ಆ. 02): ನಗರದ ಚರ್ಚ್ ಸರ್ಕಲ್ ಬಳಿ ವ್ಯಕ್ತಿಯೋರ್ವರಿಗೆ ಬೈದು, ಆತನ ಬೈಕನ್ನು ನೆಲಕ್ಕೆ ಉರುಳಿಸಿ ದುರ್ನಡತೆ ತೋರಿದ್ದ ಎಎಸ್ಐ ರಮೇಶ್ ರಿಂದ ಎಸ್ಪಿ ರಾಹುಲ್ ಕುಮಾರ್ ಶಹಾಪುರ್‌ವಾಡ್ ಸಾರ್ವಜನಿಕರಿಗೆ ಕ್ಷಮೆ ಕೇಳಿಸಿದ್ದಾರೆ. ಎಸ್ಪಿಯವರ ಈ ನಡೆ ಸಾರ್ವಜನಿಕ ಪ್ರಶಂಸೆಗೆ ಕಾರಣವಾಗಿದೆ. ಕಿರುಕುಳಕ್ಕೊಳಗಾದ ವ್ಯಕ್ತಿಯ ವಿಳಾಸ ಪತ್ತೆಹಚ್ಚಿ, ಅವರನ್ನು ಕರೆಸಿ ಸಾಂತ್ವನ ಕೂಡಾ ಹೇಳಿದ್ದರು.