ತುಮಕೂರು: ಮಕ್ಕಳ ಹಾಡಿಗೆ ತಲೆದೂಗಿದ ಶ್ರೀಗಳು..!
ಶ್ರೀ ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ರಾಜ್ಯಮಟ್ಟದ ಸಿಂಗಿಂಗ್ ಕಾಂಪೀಟೇಷನ್‌ಗೆ ಆಯ್ಕೆಯಾಗಿದ್ದಾರೆ. ಶ್ರೀಗಳ ಆಶೀರ್ವಾದ ಪಡೆದು ರಾಜ್ಯಮಟ್ಟದ ಕಾಂಪಿಟೇಷನ್ ಮಕ್ಕಳು ಸಿದ್ದತೆ ನಡೆಸುತ್ತಿದ್ದಾರೆ.
ತುಮಕೂರು(ಡಿ.10): ಶ್ರೀ ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ರಾಜ್ಯಮಟ್ಟದ ಸಿಂಗಿಂಗ್ ಕಾಂಪೀಟೇಷನ್‌ಗೆ ಆಯ್ಕೆಯಾಗಿದ್ದಾರೆ. ಶ್ರೀಗಳ ಆಶೀರ್ವಾದ ಪಡೆದು ರಾಜ್ಯಮಟ್ಟದ ಕಾಂಪಿಟೇಷನ್‌ಗೆ ಮಕ್ಕಳು ಸಿದ್ದತೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳು ಶ್ರೀಗಳ ಮುಂದೆ ಹಾಡು ಹಾಡಿದ್ದಾರೆ. ಗುರುವಿನ ಆಟ ಬಲ್ಲವರ್ಯಾರು ಎಂಬ ಮಕ್ಕಳು ಹಾಡಿದ ಜನಪದ ಹಾಡಿಗೆ ಶ್ರೀಗಳು ತಲೆದೂಗಿದ್ದಾರೆ. ಯುವಜನೋತ್ಸವದಲ್ಲಿ ನಡೆದ ಸ್ಪರ್ಧೆಯಲ್ಲಿ ಮಠದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹಾಡು ಕೇಳಿ ತಲೆದೂಗಿದ ಶ್ರೀಗಳು ಮಕ್ಕಳಿಗೆ ಗೆದ್ದು ಬರುವಂತೆ ಆಶೀರ್ವಾದ ಮಾಡಿದ್ದಾರೆ.