Tumakur: ಜಾಹಿರಾತು ಫಲಕಗಳಿಗಾಗಿ ಬೇವಿನ ಮರಗಳನ್ನು ಕತ್ತರಿಸಿದ ಕಿಡಿಗೇಡಿಗಳು
ಜಾಹಿರಾತು ಫಲಕಗಳಿಗೆ (Flex) ಅಡ್ಡವಾಗಿದೆ ಎಂದು ಬೇವಿನ ಮರಗಳನ್ನು (Tree Cutting) ಕಡಿದು ಹಾಕಿದ್ದಾರೆ ಕಿಡಿಗೇಡಿಗಳು. ಇಲ್ಲಿನ ಬಿ ಎಚ್ ರಸ್ತೆಯಲ್ಲಿನ 10 ಕ್ಕೂ ಹೆಚ್ಚು ಬೇವಿನ ಮರಗಳನ್ನು ನೆಲಕ್ಕುರುಳಿಸಿದ್ದಾರೆ.
ತುಮಕೂರು (ಜ. 23): ಜಾಹಿರಾತು ಫಲಕಗಳಿಗೆ (Flex) ಅಡ್ಡವಾಗಿದೆ ಎಂದು ಬೇವಿನ ಮರಗಳನ್ನು (Tree Cutting) ಕಡಿದು ಹಾಕಿದ್ದಾರೆ ಕಿಡಿಗೇಡಿಗಳು. ಇಲ್ಲಿನ ಬಿ ಎಚ್ ರಸ್ತೆಯಲ್ಲಿನ 10 ಕ್ಕೂ ಹೆಚ್ಚು ಬೇವಿನ ಮರಗಳನ್ನು ನೆಲಕ್ಕುರುಳಿಸಿದ್ದಾರೆ. ರಾತ್ರೋರಾತ್ರಿ ಮರಗಳನ್ನು ಕಡಿದು ಹಾಕಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.