Asianet Suvarna News Asianet Suvarna News

ಕರ್ಫ್ಯೂ ತೆರವು: ಮಡಿಕೇರಿಯಲ್ಲಿ ಪ್ರವಾಸಿಗರ ದಂಡು..!

Sep 14, 2021, 5:36 PM IST

ಕೊಡಗು(ಸೆ.14): ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಆಗದ ಹಿನ್ನೆಲೆಯಲ್ಲಿ ಮುಂದುವರೆಸಲಾಗಿದ್ದ ವೀಕೆಂಡ್ ಕರ್ಫ್ಯೂ ತೆರವು ಮಾಡಲಾಗಿದೆ. ಕರ್ಫ್ಯೂ ತೆರವು ಮಾಡಿದ ಬೆನ್ನಲ್ಲೇ ಕೊಡಗು ಜಿಲ್ಲೆಯತ್ತ ಪ್ರವಾಸಿಗರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ. ವೀಕೆಂಡ್ ಹಾಗೂ ಗಣೇಶ ಹಬ್ಬದ ರಜೆ ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಲಗ್ಗೆಯಿಡುತ್ತಿದ್ದಾರೆ. ಇದರಿಂದ ಪ್ರಮುಖ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ.

ವೀಕೆಂಡಲ್ಲಾದ್ರೂ ಔಟಿಂಗ್ ಹೋಗಿ! ಬೆಂಗಳೂರು ಹತ್ರದ ಬೆಸ್ಟ್ 5 ಜಾಗಗಳು!

ಅದರಲ್ಲೂ ಜನಾಕರ್ಷಣೆಯೆ ಕೇಂದ್ರವಾಗಿರುವ ದುಬಾರೆ ಪ್ರವಾಸಿ ತಾಣದಲ್ಲಿ ಹೆಚ್ಚಿನ ಪ್ರವಾಸಿಗರು ಕಂಡುಬರುತ್ತಿದ್ದಾರೆ. ಕಾವೇರಿ ನದಿಯನ್ನು ಬೋಟ್ ಮೂಲಕ ದಾಟಿ ಆನೆ ಮಜ್ಜನವನ್ನು ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ನದಿ ದಾಟೋದಕ್ಕಾಗಿ ಪ್ರವಾಸಿಗರಿಗಾಗಿ ಅರಣ್ಯ ಇಲಾಖೆ ಬೋಟ್ ವ್ಯವಸ್ಥೆಯನ್ನು ಕಲ್ಪಿಸಿದೆ. ಕೊರೋನಾವನ್ನು ಬದಿಗಿಟ್ಟು ಪುಟ್ಟಪುಟ್ಟ ಮಕ್ಕಳನ್ನು ಕೂಡ ಪೋಷಕರು ಪ್ರವಾಸಿತಾಣಗಳಿಗೆ ಕರೆತರುತ್ತಿದ್ದಾರೆ.

Video Top Stories