ಊಟ, ಉಡುಪು ಕದಿಯುತ್ತಿದ್ದ ಮಾನಸಿಕ ಅಸ್ವಸ್ಥನ ಬಂಧನ: ಸಿಸಿ ಕ್ಯಾಮೆರಾದಲ್ಲಿ ಕೈಚಳಕ ಸೆರೆ
ಬಾಗಲಕೋಟೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಊಟ ಹಾಗೂ ಉಡುಪು ಕದಿಯುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಾಗಲಕೋಟೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಊಟ ಹಾಗೂ ಉಡುಪು ಕದಿಯುತ್ತಿದ್ದ ಮಾನಸಿಕ ಅಸ್ವಸ್ಥನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಾಗಲಕೋಟೆಯ ಬನಹಟ್ಟಿಯಲ್ಲಿ ಘಟನೆ ನಡೆದಿದೆ. ಬನಹಟ್ಟಿಯ ಲಕ್ಷ್ಮಿನಗರ, ಕಾಡಸಿದ್ದೇಶ್ವರ ನಗರ, ಲಕ್ಷ್ಮಿನಗರದಲ್ಲಿ ಜನ ಈತನ ಕೃತ್ಯದಿಂದ ಭಯಗೊಂಡಿದ್ದರು. ಮನೆಯಲ್ಲಿದ್ದ ಬಟ್ಟೆ ಆಹಾರ ಇದ್ದಕ್ಕಿದಂತೆ ನಾಪತ್ತೆಯಾಗುವುದನ್ನು ಕಂಡು ಜನ ಸಿಸಿಟಿವಿ ಅಳವಡಿಸಿದ್ದರು. ಅಲ್ಲದೇ ಬನಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದಾದ ನಂತರ ಸಿಸಿಟಿವಿಯಲ್ಲಿ ದೃಶ್ಯ ಪರಿಶೀಲಿಸಿದಾಗ ಮಾನಸಿಕ ಅಸ್ವಸ್ಥನ ಕೃತ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ.