ವೀಕೆಂಡ್ ಕರ್ಪ್ಯೂನಿಂದ ಬೀದಿಗೆ ಬಂದ ಕಲಾವಿದರ ಬದುಕು: ಮಕ್ಕಳ ಸ್ಕೂಲ್ ಫೀಸ್ ಕಟ್ಟಲೂ ಪರದಾಟ
* ಇನ್ನೇನು ಬದುಕು ಹಳಿಗೆ ಬಂತು ಎನ್ನುವಷ್ಟರಲ್ಲಿ ಮತ್ತೊಂದು ಆಘಾತ
* ನಾಟಕದ ಮೂಲಕ ಮನರಂಜಿಸುವವರ ಮನಕಲಕುವ ಕಥೆ
* 50-50 ನಿಯಮ ಫಾಲೋ ಮಾಡಿ ನಾಟಕ ಪ್ರದರ್ಶನಕ್ಕೆ ಅವಕಾಶ ಕೊಡಿ
ಧಾರವಾಡ(ಜ.17): ನಗರದ ಸಿಬಿಟಿ ಪಕ್ಕದಲ್ಲಿ ರಾಜಣ್ಣ ಜೇವರ್ಗಿ ಅವರ ಮಾಲೀಕತ್ವದ ಗುಬ್ಬಿ ನಾಟಕ ಕಂಪನಿ ಕಳೆದೊಂದು ತಿಂಗಳಿಂದ 30 ಜನರ ತಂಡದೊಂದಿಗೆ 'ಮೂಕದನ ಮಾತಾಡಿತು' ಎಂಬ ನಾಟಕವನ್ನ ಪ್ರದರ್ಶನ ಮಾಡುತ್ತಿದೆ. ಮನರಂಜನೆ ನೀಡುವ ಮತ್ತು ಕುಟುಂಬ ಸಮೇತ ನೋಡುವಂಥ ಈ ನಾಟಕ ಇನ್ನೆನು ಚೆನ್ನಾಗಿ ನಡೆಯಬೇಕಿದ್ದಂತಹ ಸಂದರ್ಭದಲ್ಲೇ ಸರಕಾರ ಟಫ್ ರೂಲ್ಸ್‌ಗಳನ್ನ ಜಾರಿಗೆ ತಂದಿದೆ. ಶನಿವಾರ ಮತ್ತು ರವಿವಾರ ಅಲ್ಪಸ್ವಲ್ಪ ಹೊಟ್ಟೆ ತುಂಬುವಷ್ಟು ಜನರು ಬರ್ತಿದ್ರು. ಸದ್ಯ ವಿಕೇಂಡ್ ಕರ್ಫ್ಯೂ ಇರುವ ಕಾರಣಕ್ಕೆ ಅದಕ್ಕೂ ಈಗ ಹೊಟ್ಟೆ ಮೆಲೆ ಬರೆ ಎಳದಂಗೆ ಮಾಡಿದೆ.
ನಮಗೆ ತುಂಬಾ ಸಮಸ್ಯೆಯಾಗಿದೆ, ಹೊಡೆತದ ಮೇಲೆ ಹೊಡೆತ ಬೀಳುತ್ತಿದೆ. ಈವಾಗ ನಮಗೆ ಧಾರವಾಡದಲ್ಲಿ ನಾಟಕ ಒಳ್ಳೆಯ ಪ್ರದರ್ಶನ ಕಾಣುತ್ತೆ ಎಂದು ಅಂದುಕ್ಕೊಂಡಿದ್ವಿ, ಆದರೆ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಮಾಡಿದಕ್ಕೆ ಹೇಳಲಿಕ್ಕೆ ಆಗದಷ್ಡು ನಷ್ಟ ಆಗಿದೆ ಅಂತ ನಾಟಕ ಕಂಪನಿಯನ್ನ ಮುನ್ನಡೆಸುತ್ತಿರುವ ನೀಲಾ ಜೇವರ್ಗಿ ಅವರು ತಿಳಿಸಿದ್ದಾರೆ.
Covid Surge: 6 ಜಿಲ್ಲೆಗಳಲ್ಲಿ ಶಾಲೆ ಬಂದ್, ಶಾಲೆ ಪ್ರಾರಂಭಕ್ಕೆ ರುಪ್ಸಾ ಮನವಿ
ರಂಗಭೂಮಿ ಕಲಾವಿದರಿಗೆ ವಿಕೆಂಡ್ ಕರ್ಫ್ಯೂನಿಂದ ಹೊಡೆತ ಬಿದ್ದಿದೆ. ಬಸ್‌ಗಳೂ ಆರಂಭವಾಗಿವೆ, ಮಾರ್ಕೆಟ್‌ನಲ್ಲಿ ಎಲ್ಲವೂ ಆರಂಭವಾಗಿದೆ. ನಾವೂ ಸರಕಾರದ ರೂಲ್ಸ್‌ಗಳನ್ನ ಫಾಲೋ ಮಾಡಿ ನಾಟಕ ಪ್ರದರ್ಶನವನ್ನ ಮಾಡುತ್ತೆವೆ, ರಂಗಭೂಮಿಗೆ ಕಳೆದ 10 ವರ್ಷದಿಂದ ಯುವಕರು ಬರ್ತಾ ಇದಾರೆ, ಅದರಲ್ಲೂ ವಿದ್ಯಾವಂತರು ಇದಾರೆ, ಕಲೆಯನ್ನ ಪ್ರದರ್ಶನ ಮಾಡಲೂ ಮುಂದಾಗುತ್ತಿದ್ದಾರೆ, ನಾವೂ ಮನುಷ್ಯರೇ. ನಮಗೆ ಪ್ರದರ್ಶನಕ್ಕೆ ಅವಕಾಶ ಕೊಡಿ ಎಂದು ಕಲಾವಿದರು ಸರಕಾರಕ್ಕೆ ಒತ್ತಾಯ ಮಾಡಿದ್ದಾರೆ.