Asianet Suvarna News Asianet Suvarna News

ಕೊರೆವ ಚಳಿಗೆ ಹೈರಾಣಾದ ಉತ್ತರ ಕರ್ನಾಟಕದ ಜನತೆ!

ಉತ್ತರ ಕರ್ನಾಟಕದಲ್ಲಿ ಕೊರೆವ ಚಳಿ ಆರಂಭ| ಏಕಾಏಕಿ ತಾಪಮಾನ ಕುಸಿದಿದ್ದರಿಂದ ತತ್ತರಿಸಿದ ಜನತೆ|ಬೀದರ್‌ನಲ್ಲಿ 12 ಡಿಗ್ರಿ, ವಿಜಯಪುರದಲ್ಲಿ 12.8 ಡಿಗ್ರಿ, ಕಲಬುರಗಿಯಲ್ಲಿ 12 ಡಿಗ್ರಿ, ಬೆಳಗಾವಿಯಲ್ಲಿ 12 ಹಾಗೂ ಬಾಗಲಕೋಟೆಯಲ್ಲಿ 16 ಡಿಗ್ರಿಯಷ್ಟು ತಾಪಮಾನ ಕುಸಿತ|

First Published Dec 18, 2019, 1:51 PM IST | Last Updated Dec 18, 2019, 1:52 PM IST

ಬೆಳಗಾವಿ(ಡಿ.18): ಬಿಸಿಲ ನಾಡು ಉತ್ತರ ಕರ್ನಾಟಕದಲ್ಲಿ ಕೊರೆವ ಚಳಿಗೆ ಜನರು ಹೈರಾಣಾಗಿದ್ದಾರೆ. ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕೊರೆವ ಚಳಿ ಆರಂಭವಾಗಿದೆ. ಬೀದರ್‌ನಲ್ಲಿ 12 ಡಿಗ್ರಿ, ವಿಜಯಪುರದಲ್ಲಿ 12.8 ಡಿಗ್ರಿ, ಕಲಬುರಗಿಯಲ್ಲಿ 12 ಡಿಗ್ರಿ, ಬೆಳಗಾವಿಯಲ್ಲಿ 12 ಹಾಗೂ ಬಾಗಲಕೋಟೆಯಲ್ಲಿ 16 ಡಿಗ್ರಿಯಷ್ಟು ತಾಪಮಾನ ಕುಸಿದಿದಿದೆ. ಇದರಿಂದ ಜನ ಮನೆ ಬಿಟ್ಟು ಹೊರಗಡೆ ಬಾರದ ಸ್ಥಿತಿ ನಿರ್ಮಾಣವಾಗಿದೆ. 

19 ರಿಂದ 22 ಡಿಗ್ರಿವರೆಗೆ ಇದ್ದ ತಾಪಮಾನ ಏಕಾಏಕಿ ಕುಸಿತ ಕಂಡಿದೆ. ಇದರಿಂದ ಈ ಭಾಗದ ಜನ ಕಂಗಾಲಾಗಿದ್ದಾರೆ. ತಾಪಮಾನ ಇನ್ನಷ್ಟು ಕುಸಿಯಲಿದ್ದು, ಚಳಿ ಪ್ರಮಾಣ ಹೆಚ್ಚಳವಾಗಲಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಉತ್ತರ ಕರ್ನಾಟಕದ ಜನ ಮತ್ತಷ್ಟು ತತ್ತರಿಸಲಿದ್ದಾರೆ.