ಶಿವಮೊಗ್ಗದಲ್ಲೊಂದು ಜೀ ಹುಜೂರ್ ಸಂಸ್ಕೃತಿ: ಈಶ್ವರಪ್ಪ ಕಾಲಿಗೆ ಬಿದ್ದ ತಹಸೀಲ್ದಾರ್
ಲ್ಲಿನ ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಜನಸಂದಣಿಯ ಎದುರೇ ಸಚಿವ ಕೆ ಎಸ್ ಈಶ್ವರಪ್ಪನವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆ ಶುಕ್ರವಾರ ನಡೆದಿದೆ.
ಶಿವಮೊಗ್ಗ, (ಮೇ.01): ಇಲ್ಲಿನ ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕರು ಜನಸಂದಣಿಯ ಎದುರೇ ಸಚಿವ ಕೆ ಎಸ್ ಈಶ್ವರಪ್ಪನವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಘಟನೆ ಶುಕ್ರವಾರ ನಡೆದಿದೆ.
ಶಿವಮೊಗ್ಗದ ನೂತನ ತಹಶೀಲ್ದಾರ್ ನಾಗರಾಜ್ ಮತ್ತು ರೆವಿನ್ಯೂ ಇನ್ಸ್‌ಪೆಕ್ಟರ್ ವಿಜಯ ಕುಮಾರ್ ಸಾರ್ವಜನಿಕರ ಎದುರಿನಲ್ಲೇ ಸಚಿವರ ಕಾಲಿಗೆರಗಿದ ಪ್ರಸಂಗ ನಡೆಯಿತು.