ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಮರ ಕಡಿಸಿದ ಓರ್ವ ಅಧಿಕಾರಿ ಅಮಾನತು
ತಪ್ಪು ಮಾಡಿದ್ದನ್ನು ನೋಡಿಕೊಂಡು ಸುವರ್ಣ ನ್ಯೂಸ್ ಎಂದೂ ಸುಮ್ಮನೆ ಕುಳಿತುಕೊಳ್ಳಲ್ಲ. ಕ್ರಮ ಆಗುವವರೆಗೂ ವರದಿಯನ್ನು ನಿಲ್ಲಿಸಲ್ಲ.. ಯಾವ ಒತ್ತಡಕ್ಕೂ ಬಗ್ಗಲ್ಲ.. ಈ ಮಾತು ತುಮಕೂರು ಜಿಲ್ಲೆಯ ತಿಪ್ಪೂರಿನ ಮರಗಳ ಮಾರಣ ಹೋಮ ಪ್ರಕರಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ತುಮಕೂರು, [ಮಾ.10]: ತಪ್ಪು ಮಾಡಿದ್ದನ್ನು ನೋಡಿಕೊಂಡು ಸುವರ್ಣ ನ್ಯೂಸ್ ಎಂದೂ ಸುಮ್ಮನೆ ಕುಳಿತುಕೊಳ್ಳಲ್ಲ. ಕ್ರಮ ಆಗುವವರೆಗೂ ವರದಿಯನ್ನು ನಿಲ್ಲಿಸಲ್ಲ.. ಯಾವ ಒತ್ತಡಕ್ಕೂ ಬಗ್ಗಲ್ಲ.. ಈ ಮಾತು ತುಮಕೂರು ಜಿಲ್ಲೆಯ ತಿಪ್ಪೂರಿನ ಮರಗಳ ಮಾರಣ ಹೋಮ ಪ್ರಕರಣದಲ್ಲಿ ಮತ್ತೊಮ್ಮೆ ಸಾಬೀತಾಗಿದೆ.
ತಿಪ್ಪೂರು ಮರ ಪ್ರಕರಣ: ಪ್ರತಿಭಟನಾಕಾರರಿಗೆ ಹೆದರಿ ತಹಶೀಲ್ದಾರ್ ಎಸ್ಕೇಪ್!
ಸುವರ್ಣ ನ್ಯೂಸ್ ನಿರಂತರ ವರದಿಯಿಂದ ತುಮಕೂರು ಜಿಲ್ಲಾಡಳಿತ ಬೆಚ್ಚಿಬಿದ್ದಿದೆ. ಮರಗಳನ್ನು ಕಡಿಯಲು ಕಾರಣವಾಗಿದ್ದ ಗ್ರಾಮ ಲೆಕ್ಕಾಧಿಕಾರಿ ಮುರುಳಿಯನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದಾರೆ. ಆದರೆ ಆದೇಶ ನೀಡಿ ತಪ್ಪು ಮಾಡಿ ತಹಸೀಲ್ದಾರ್ ವಿರುದ್ಧ ಮಾತ್ರ ಇನ್ನೂ ಕ್ರಮ ಆಗಿಲ್ಲ.