ರಾಜ್ಯಾದ್ಯಂತ ಕರ್ಪ್ಯೂ: ಸಾಂಸ್ಕೃತಿಕ ನಗರಿಯಲ್ಲಿ ಹೇಗಿದೆ ಪರಿಸ್ಥಿತಿ?

ರಾಜ್ಯಾದ್ಯಂತ ಭಾನುವಾರ ಕರ್ಪ್ಯೂ ಹೇರಲಾಗಿದೆ. ಈ ಮೂಲಕ ಜನರ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದ್ದು, ಕೊರೋನಾ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದರೂ ಸರ್ಕಾರ ಕೆಲ ವಿನಾಯಿತಿ ನೀಡಿದೆ.

First Published May 24, 2020, 3:44 PM IST | Last Updated May 24, 2020, 3:44 PM IST

ಮೈಸೂರು(ಮೇ.24):  ರಾಜ್ಯಾದ್ಯಂತ ಭಾನುವಾರ ಕರ್ಪ್ಯೂ ಹೇರಲಾಗಿದೆ. ಈ ಮೂಲಕ ಜನರ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದ್ದು, ಕೊರೋನಾ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದರೂ ಸರ್ಕಾರ ಕೆಲ ವಿನಾಯಿತಿ ನೀಡಿದೆ.

ಹೀಗಿರುವಾಗ ಸಾಸ್ಕೃತಿಕ ನಗರಿ ಮೈಸೂರಿನಲ್ಲಿ ಹಣ್ಣು ಹಂಪಲು ವ್ಯಾಪಾರಿಗಳೂ ಕರ್ಫ್ಯೂ ನಿಮಿತ್ತ ಮನೆಯಲ್ಲೇ ಉಳಿದದ್ದಾರೆ, ಜನರು ಕೂಡಾ ಮನೆಯಲ್ಲೇ ಉಳಿದಿದ್ದಾರೆ. ಕೇವಲ ಒಂದು ಗಂಟೆಯಷ್ಟೇ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆದಿದೆ. 

ಆಟೋಗಳ ಸಂಖ್ಯೆಯೂ ತೀವ್ರ ಕಡಿಮೆಯಾಗಿದೆ. ಪೊಲೀಸರು ಕೂಡಾ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಮುಚ್ಚಿದ್ದಾರೆ. ಈ ಮೂಲಕ ಭಾನುವಾರದ ಕರ್ಫ್ಯೂ ಬಹುತೇಕ ಯಶಸ್ವಿಯಾಗಿದೆ.