Asianet Suvarna News Asianet Suvarna News

ಬೆಳಗಾವಿ ವಿವಿ: ಮೈಮೇಲೆ ನೀರು ಸುರಿದುಕೊಂಡು ವಿದ್ಯಾರ್ಥಿಗಳ ಪ್ರತಿಭಟನೆ

ಮೈಮೇಲೆ ನೀರು ಸುರಿದುಕೊಂಡು ವಿದ್ಯಾರ್ಥಿಗಳ ಪ್ರತಿಭಟನೆ| ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ಧರಣಿ| ರಾಣಿ ಚೆನ್ನಮ್ಮ ವಿವಿಯ ಹಾಸ್ಟೆಲ್ ನಲ್ಲಿ ಎದುರಾದ ನೀರಿನ ಸಮಸ್ಯೆ|  ವಿವಿ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳ ಆಕ್ರೋಷ|
 

ಬೆಳಗಾವಿ[ಜ.22]: ಮೈಮೇಲೆ ನೀರು ಸುರಿದುಕೊಂಡು ವಿದ್ಯಾರ್ಥಿಗಳು ವಿನೂತನವಾಗಿ ಪ್ರತಿಭಟನೆ ಮಾಡಿದ ಘಟನೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಇಂದು[ಬುಧವಾರ] ನಡೆದಿದೆ.  ರಾಣಿ ಚೆನ್ನಮ್ಮ ವಿವಿಯ ಹಾಸ್ಟೆಲ್ ನಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಆದರೆ, ಆಡಳಿತ ಮಂಡಳಿ ಮಾತ್ರ ಇದರ ಕಡೆ ಗಮನ ಹರಿಸಿಲ್ಲ. 

ನೀರಿನ ಸಮಸ್ಯೆ ಈಡೇರಿಸುವಂತೆ ವಿದ್ಯಾರ್ಥಿಗಳು ಹಲವಾರು ಬಾರಿ ವಿವಿ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಆದರೆ, ವಿವಿ ಆಡಳಿತ ಮಂಡಳಿ ಮಾತ್ರ ವಿದ್ಯಾರ್ಥಿಗಳ ಬೇಡಿಕೆಗೆ ಸ್ಫಂದಿಸಿಲ್ಲ. ಹೀಗಾಗಿ ವಿವಿ ಆಡಳಿತ ಮಂಡಳಿಯ ನಡೆ ಖಂಡಿಸಿದ ವಿದ್ಯಾರ್ಥಿಗಳು ಮೈಮೇಲೆ ನೀರು ಸುರಿದುಕೊಂಡು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ವಿವಿ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ. 

Video Top Stories