ಮಂಗಳೂರಿನಲ್ಲಿ ಮಹಿಳಾ ಪೊಲೀಸರಿಗೆ ಒತ್ತಡ ನಿವಾರಣೆ ಕಾರ್ಯಕ್ರಮ: ನಟಿ ಭವ್ಯ ಭಾಗಿ
ಮಹಿಳಾ ಪೊಲೀಸರಿಗೆ ಒತ್ತಡ ನಿವಾರಣೆ ಕಾರ್ಯಕ್ರಮದಲ್ಲಿ ನಟಿ ಭವ್ಯ ಭಾಗಿಯಾಗಿ ಸಂವಾದ ನಡೆಸಿದ್ದಾರೆ.
ಮಂಗಳೂರು ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಾರ್ಯಕ್ರಮ ನಡೆದಿದ್ದು, ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು. ಇನ್ನು ನಟಿ ಭವ್ಯ ಅವರಿಗೆ ಸನ್ಮಾನ ಮಾಡಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಯುಗ ಯುಗಗಳೇ ಸಾಗಲಿ ಹಾಡು ಹಾಡಿದರು. ಇನ್ನು ಇದೇ ವೇಳೆ ನಟಿ ಭವ್ಯ ಜೊತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೆಲ್ಫಿ ತೆಗೆದುಕೊಂಡರು. ಚಿತ್ರವೊಂದರ ಶೂಟಿಂಗ್‌ಗೆ ನಟಿ ಭವ್ಯ ಮಂಗಳೂರಿಗೆ ಬಂದಿದ್ದರು.