Asianet Suvarna News Asianet Suvarna News

ಮೃತನ ದರ್ಶನಕ್ಕೆ ಬಂದಿದ್ದ ವಾನರ, 9ನೇ ದಿನದ ಕಾರ್ಯಕ್ಕೂ ಬಂದ! ಅಚ್ಚರಿಯಾದರೂ ಸತ್ಯ!

Jul 16, 2021, 10:13 AM IST

ಬಳ್ಳಾರಿ (ಜು. 16): ಅಚ್ಚರಿ ಆದರೂ ನಡೆದಿರೋದು ಸತ್ಯವಾದ ಘಟನೆ! ಮೃತನ ದರ್ಶನಕ್ಕೆ ಬಂದಿದ್ದ ವಾನರ, 9ನೇ ದಿನದ ಕಾರ್ಯಕ್ಕೂ ಬಂದ!  ಕಂಪ್ಲಿ ತಾಲೂಕಿನ ಬಸವೇಶ್ವರ ಕ್ಯಾಂಪ್ ನಲ್ಲಿ ನಡೆದ ಘಟನೆ ಇದು. 

ಜೂ. 30 ರಂದು ವಿಶ್ವನಾಥ್ ರಾಜು (70) ಎಂಬ ವ್ಯಕ್ತಿ ಮೃತಪಟ್ಟಿದ್ದರು.  ವಿಶ್ವನಾಥ್ ರಾಜು ಅವರು ಮೃತರಾದ ದಿನ ಮನೆಗೆ ಬಂದಿದ್ದ ಕೋತಿ, ವಿಶ್ವನಾಥ್ ಶವದ ಮುಂದೆ ಕುಳಿತು ಮುಖ ತೆರೆದು ನೋಡಿಕೊಂಡು ಹೋಗಿತ್ತು. ಬಳಿಕ 9 ನೇ ದಿನದ ಕಾರ್ಯ ಮಾಡುವಾಗ ಅದೇ ಕೋತಿ ಮತ್ತೆ ಪ್ರತ್ಯಕ್ಷವಾಗಿದೆ.  ಕೋತಿಯ ಈ ನಡವಳಿಕೆ ಕಂಡು  ಜನರು ಅಚ್ಚರಿಗೊಂಡಿದ್ದಾರೆ.