ಮೈಸೂರು ಕೊರೊನಾ ಮುಕ್ತ..ಮುಕ್ತ; ಉಸ್ತುವಾರಿ ಸಚಿವರ ಮಾತುಗಳಿವು!
ರಾಜ್ಯದಲ್ಲಿ ಸತತ ಕೊರೋನಾ ಸೋಂಕು ಪ್ರಕರಣಗಳಿಂದ ಆತಂಕ ಸೃಷ್ಟಿಸಿದ್ದ ಕೆಂಪು ವಲಯದಲ್ಲಿದ್ದ ಮೈಸೂರು ಶುಕ್ರವಾರ ಸಂಪೂರ್ಣ ಸೋಂಕು ಮುಕ್ತಗೊಂಡಿದೆ. ಸೋಂಕಿತರಾಗಿದ್ದ 90 ಮಂದಿಯೂ ಗುಣಮುಖರಾಗುವ ಮೂಲಕ ಮೈಸೂರು ಜಿಲ್ಲೆ ದೇಶಕ್ಕೆ ಮಾದರಿ ಎಂಬಂತಹ ಚೇತರಿಕೆ ಕಂಡಿದೆ.
ಮೈಸೂರು (ಮೇ. 16): ರಾಜ್ಯದಲ್ಲಿ ಸತತ ಕೊರೋನಾ ಸೋಂಕು ಪ್ರಕರಣಗಳಿಂದ ಆತಂಕ ಸೃಷ್ಟಿಸಿದ್ದ ಕೆಂಪು ವಲಯದಲ್ಲಿದ್ದ ಮೈಸೂರು ಶುಕ್ರವಾರ ಸಂಪೂರ್ಣ ಸೋಂಕು ಮುಕ್ತಗೊಂಡಿದೆ. ಸೋಂಕಿತರಾಗಿದ್ದ 90 ಮಂದಿಯೂ ಗುಣಮುಖರಾಗುವ ಮೂಲಕ ಮೈಸೂರು ಜಿಲ್ಲೆ ದೇಶಕ್ಕೆ ಮಾದರಿ ಎಂಬಂತಹ ಚೇತರಿಕೆ ಕಂಡಿದೆ.
ಕರ್ನಾಟಕ ರಾಗಿ, ಕಾಶ್ಮೀರಿ ಕೇಸರಿ, ತೆಲಂಗಾಣ ಅರಿಶಿನ ಇನ್ಮೇಲೆ ಇಂಟರ್ ನ್ಯಾಷನಲ್..!
ರಾಜ್ಯದಲ್ಲಿ ಒಟ್ಟು 35 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದರೆ ಮೈಸೂರಿನಲ್ಲಿ ವರದಿಯಾಗಿದ್ದ 90 ಪ್ರಕರಣಗಳಲ್ಲಿ ಒಂದೂ ಸಾವಿಲ್ಲದೆ ಅಷ್ಟೂಮಂದಿಗೆ ಗುಣಮುಖರಾಗಿ ಮನೆ ಸೇರಿದ್ದಾರೆ. ಈ ಬಗ್ಗೆ ಮೈಸೂರು ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿದೆ ನೋಡಿ!