Asianet Suvarna News Asianet Suvarna News

ಮಲೆ ಮಹದೇಶ್ವರನಿಗೆ ಶ್ರಾವಣದ ವಿಶೇಷ ಪೂಜೆ, ಮೆರವಣಿಗೆ

Aug 30, 2019, 10:07 PM IST

ಚಾಮರಾಜನಗರ[ಆ. 30]  ಶ್ರಾವಣ ಮಾಸದ ಕೊನೆ ಅಮಾವಾಸ್ಯೆ ಪ್ರಯುಕ್ತ ಮಲೆಮಹದೇಶ್ವರ ಶ್ರೀ ಕ್ಷೇತ್ರದಲ್ಲಿ ವಿಶೇಷ ಪೂಜೆ, ಹೋಮ-ಹವನ ಹಮ್ಮಿಕೊಳ್ಳಲಾಗಿತ್ತು. ಮಲೆಮಹದೇಶ್ವರ ಪ್ರಾಧಿಕಾರದ ಅಜೀವ ಟ್ರಸ್ಟಿ ಸಾಲೂರು ಮಠದ ಪಟ್ಟದಗುರುಸ್ವಾಮಿಗಳ ಆಶೀರ್ವಾದದೊಂದಿಗೆ 108 ಪೂರ್ಣ ಕುಂಭ ಹೊತ್ತ 108 ಅರ್ಚಕರು ಮೆರವಣಿಗೆಯಲ್ಲಿ ಪಾಲ್ಗೊಂಡರು. ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಆನಂದ್, ಸಹ ಕಾರ್ಯದರ್ಶಿ ರಾಜಶೇಖರ್, ಅಧೀಕ್ಷಕರಾದ ಬಸವರಾಜು, ಸರಗೂರು ಮಹದೇವಸ್ವಾಮಿ, ಪಾರುಪತ್ತೆದಾರರಾದ ಮಹದೇವಸ್ವಾಮಿ, ಶ್ರೀಕ್ಷೇತ್ರದ ತೋಟಗಾರಿಕೆ ವಿಭಾಗದ ಅಧಿಕಾರಿ ಮಲ್ಲಿಕಾರ್ಜುನಪ್ಪ ಸೇರಿ ಅಪಾರ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾದರು.