Asianet Suvarna News Asianet Suvarna News

ESI ಕೋವಿಡ್ ಸೆಂಟರ್‌ನಲ್ಲಿ ನರಕ ದರ್ಶನ..!

20 ಮಹಿಳೆಯರಿಗೆ ಕೇವಲ ಎರಡು ಬಾತ್ ರೂಂ ಮಾತ್ರ ನೀಡಲಾಗಿದೆ. ಇನ್ನು ಕುಡಿಯುವುದಕ್ಕೆ ಸರಿಯಾಗಿ ನೀರು ಕೂಡಾ ಸಿಗುತ್ತಿಲ್ಲ. ಇನ್ನು ಇಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಕೂಡಾ ನೀಡಿಲ್ಲ ಎಂದು ಕ್ವಾರಂಟೈನ್‌ ಸೆಂಟರ್‌ನಲ್ಲಿರುವವರು ಆರೋಪಿಸಿದ್ದಾರೆ.

ಮೈಸೂರು(ಜು.16): ದಿನ ಬೆಳಕಾದರೆ ಕೋವಿಡ್ ಸೆಂಟರ್‌ಗಳ ಅವ್ಯವಸ್ಥೆ ವರದಿಯಾಗುತ್ತಲೇ ಇರುತ್ತದೆ. ಇದಕ್ಕೀಗ ಮೈಸೂರಿನ ESI ಕೋವಿಡ್ ಸೆಂಟರ್ ಸೇರ್ಪಡೆಯಾಗಿದೆ. ಶುಚಿತ್ವ ಎನ್ನುವುದು ಕಣ್ಮರೆಯಾಗಿದ್ದು, ಸರಿಯಾದ ಔಷಧಗಳನ್ನು ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

20 ಮಹಿಳೆಯರಿಗೆ ಕೇವಲ ಎರಡು ಬಾತ್ ರೂಂ ಮಾತ್ರ ನೀಡಲಾಗಿದೆ. ಇನ್ನು ಕುಡಿಯುವುದಕ್ಕೆ ಸರಿಯಾಗಿ ನೀರು ಕೂಡಾ ಸಿಗುತ್ತಿಲ್ಲ. ಇನ್ನು ಇಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಕೂಡಾ ನೀಡಿಲ್ಲ ಎಂದು ಕ್ವಾರಂಟೈನ್‌ ಸೆಂಟರ್‌ನಲ್ಲಿರುವವರು ಆರೋಪಿಸಿದ್ದಾರೆ.

ಎಚ್ಚರ..! 99% ಬೆಂಗಳೂರು in ಡೇಂಜರ್..!

ಕ್ವಾರಂಟೈನ್‌ ಸೆಂಟರ್‌ನಲ್ಲಿನ ಅವ್ಯವಸ್ಥೆಗೆ ಸೋಂಕಿತರು ಫುಲ್ ಗರಂ ಆಗಿದ್ದಾರೆ, ಮಾತ್ರವಲ್ಲ ಆರೋಗ್ಯ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆಯನ್ನು ಅನಾವರಣ ಮಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.