ಸಚಿವ ಸಿ.ಟಿ. ರವಿಯವರೇ ಒಮ್ಮೆ ಇವ್ರ ಕಷ್ಟಗಳಿಗೆ ಕಿವಿಯಾಗಿ ಪ್ಲೀಸ್..!
ಚಿಕ್ಕಮಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಮಧ್ಯಾಹ್ನವಾದ್ರೂ ಊಟ, ಉಪಹಾರ ಸರಿಯಾಗಿ ಸಿಕ್ತಾಯಿಲ್ಲ. ಕಾಫಿ ಬೇಡ, ಬಿಸಿ ನೀರನ್ನಾದರೂ ಸ್ವಲ್ಪ ಕೊಡಿ ಸ್ವಾಮಿ ಎಂದು ಸಿಬ್ಬಂದಿಯ ಬಳಿ ಸೋಂಕಿತರು ಅಂಗಲಾಚುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಈ ಕುರಿತಂತೆ ಸಮಯ ಬಿಡುವು ಮಾಡಿಕೊಂಡು ಗಮನಹರಿಸಬೇಕಾಗಿದೆ.
ಚಿಕ್ಕಮಗಳೂರು(ಜು.22); ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೊರೋನಾ ಅಬ್ಬರ ಜೋರಾಗಿದೆ. ಇದರ ನಡುವೆ ಕೋವಿಡ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕೂಡಾ ಬಟಾಬಯಲಾಗಿದೆ. ಸೋಂಕಿತರು ತಮ್ಮ ಅಳಲು ತೋಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಿ ಸಾಕಷ್ಟು ವೈರಲ್ ಆಗಿದೆ.
ಮಧ್ಯಾಹ್ನವಾದ್ರೂ ಊಟ, ಉಪಹಾರ ಸರಿಯಾಗಿ ಸಿಕ್ತಾಯಿಲ್ಲ. ಕಾಫಿ ಬೇಡ, ಬಿಸಿ ನೀರನ್ನಾದರೂ ಸ್ವಲ್ಪ ಕೊಡಿ ಸ್ವಾಮಿ ಎಂದು ಸಿಬ್ಬಂದಿಯ ಬಳಿ ಸೋಂಕಿತರು ಅಂಗಲಾಚುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಈ ಕುರಿತಂತೆ ಸಮಯ ಬಿಡುವು ಮಾಡಿಕೊಂಡು ಗಮನಹರಿಸಬೇಕಾಗಿದೆ.
ಬೆಂಗಳೂರು ಅನ್‌ಲಾಕ್ ಆದ್ರೆ ಚಿಕ್ಕಪೇಟೆಗಿಲ್ಲ ಈ ಭಾಗ್ಯ..!
ಕೊರೋನಾ ಸೋಂಕಿತರು ನಮ್ಮನ್ನು ಜೈಲಿಗಾದರೂ ಕಳಿಸಿ, ಅಲ್ಲಿ ರಾಗಿ ಮುದ್ದೆನಾದ್ರೂ ಸಿಗುತ್ತೆ ಎಂದು ಹತಾಷೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.