'3 ಗಂಟೆ ಸಿನಿಮಾದಲ್ಲಿ ನಟಿಸೋರು ನಿಜವಾದ ಹೀರೋಗಳಲ್ಲ'
'ಇಂದಿನ ಯುವಕರಿಗೆ ಸಿನಿಮಾ ನಟರೇ ಹೀರೋಗಳು, ಸೈನಿಕ ತನ್ನ ಮನೆಗಾಗಿ ದುಡಿಯಲ್ಲ, ತನ್ನ ಬಂಧು ಗಳಿಗಾಗಿ ದುಡಿಯಲ್ಲ, ಸಿನಿಮಾ ನಟರು ಬರೀ ನಟರು ಅಷ್ಟೇ, ಇಂದಿನ ಯುವ ಸಮೂಹ ಇದನ್ನು ಅರ್ಥ ಮಾಡಿಕೊಳ್ಳಬೇಕು'
ಚಿಕ್ಕಮಗಳೂರು (ಜ.16): ರಿಯಲ್ ಹೀರೋಗಳು ಅಂದರೆ ಸಿನಿಮಾ ನಟರಲ್ಲ, ದೇಶಕ್ಕಾಗಿ ಪ್ರಾಣ ನೀಡೋ ಸೈನಿಕ ಮತ್ತು ರೈತರು ನಿಜವಾದ ಹೀರೋಗಳು, ಎಂದು ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಪತ್ನಿ ಮಹಾದೇವಿ ಹೇಳಿದರು.
ವಿವೇಕಾನಂದ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿನ ಯುವಕರಿಗೆ ಸಿನಿಮಾ ನಟರೇ ಹೀರೋಗಳು, ಸೈನಿಕ ತನ್ನ ಮನೆಗಾಗಿ ದುಡಿಯಲ್ಲ, ತನ್ನ ಬಂಧು ಗಳಿಗಾಗಿ ದುಡಿಯಲ್ಲ, ಸಿನಿಮಾ ನಟರು ಬರೀ ನಟರು ಅಷ್ಟೇ, ಇಂದಿನ ಯುವ ಸಮೂಹ ಇದನ್ನು ಅರ್ಥ ಮಾಡಿಕೊಳ್ಳಬೇಕು, ಎಂದು ಕರೆ ನೀಡಿದರು.
ಚಿಕ್ಕಮಗಳೂರು ಜಿಲ್ಲೆಯ ಮತ್ತಷ್ಟು ಸುದ್ದಿಗಳು
ಸಿಯಾಚಿನ್‌ನಲ್ಲಿ ಕರ್ತವ್ಯದಲ್ಲಿದ್ದ ಧಾರವಾಡ ಯೋಧ ಹನುಮಂತ ಕೊಪ್ಪದ್, 2016 ಫೆಬ್ರವರಿಯಲ್ಲಿ ಘಟಿಸಿದ ಹಿಮಪಾತಕ್ಕೆ ಸಿಲುಕಿ ಹುತಾತ್ಮರಾಗಿದ್ದರು.