Asianet Suvarna News Asianet Suvarna News

ಪ್ರಿಯಾಂಕ್ ಖರ್ಗೆ ಬಲಗೈ ಬಂಟರಿಂದ ಮಣಿಕಂಠ ರಾಠೋಡ್ ಕೊಲೆ ಯತ್ನ?

ಶಾಸಕ ಪ್ರಿಯಾಂಕ ಖರ್ಗೆ ಬಂಟರಿಂದ, ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಕೊಲೆ ಯತ್ನ ಮಾಡಲಾಗಿದೆ ಎಂದು ಆರೋಪ ಕೇಳಿ ಬಂದಿದೆ.

ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಕೊಲೆಗೆ ಸ್ಕೆಚ್ ಹಾಕಲಾಗಿದ್ದು, ಶಾಸಕ ಪ್ರಿಯಾಂಕ ಖರ್ಗೆ ಬಂಟರಿಂದ  ಕೊಲೆ ಯತ್ನ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಕಂಟ್ರಿ ಮೇಡ್‌ ಪಿಸ್ತೂಲ್‌ ಮೂಲಕ ಕೊಲೆಗೆ ಪ್ಲಾನ್‌ ಮಾಡಿದ್ದು, ಎರಡು ಕಂಟ್ರಿ ಮೇಡ್‌ ಪಿಸ್ತೂಲ್‌, 30 ಬುಲೆಟ್‌ ಖರೀದಿಸಿದರ ಬಗ್ಗೆ ಮಾಹಿತಿ ಇದೆ. ನನಗೆ ಜೀವ ಬೆದರಿಕೆ ಇದೆ ಅಂತ ಗನ್‌ ಮ್ಯಾನ್‌ ನೀಡುವಂತೆ ಕೇಳಿದ್ದೆ, ಜೀವ ಬೆದರಿಕೆ ಇದ್ದರು ಇಲ್ಲಿವರೆಗೂ ಗನ್‌ ಮ್ಯಾನ್‌ ಕೊಟ್ಟಿಲ್ಲ. ಎಲ್ಲರ ಗಮನಕ್ಕೆ ಇದ್ದರು ಯಾರೂ ಕೇರ್‌ ಮಾಡುತ್ತಿಲ್ಲ. ದೂರು ಕೊಡಲು ಹೋದರು ನನ್ನ ದೂರು ಸ್ವೀಕರಿಸಿಲ್ಲ ಎಂದು ಮಣಿಕಂಠ ರಾಠೋಡ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕೆಟ್ಟ ಮೇಲೆ ಬುದ್ಧಿ ಕಲಿತ ಮಹಾರಾಷ್ಟ್ರ ಸರ್ಕಾರ: ಗಡಿ ಗ್ರಾಮಗಳಿಗೆ ತುರ ...

Video Top Stories