ಮೈಸೂರು ಮುಡಾದಿಂದ 50:50 ಸೈಟ್ ಹಂಚಿಕೆ ಹಗರಣ: ಸಿಎಂ ಪತ್ನಿಗೆ ಬದಲಿ ಸೈಟ್ ಹಂಚಿಕೆಯಲ್ಲಿ ರೂಲ್ಸ್ ಬ್ರೇಕ್..?
ಸಿಎಂ ವಿರುದ್ಧ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ದೂರು ನೀಡಲಾಗಿದೆ. ಸಿಎಂ ಪತ್ನಿಗೆ ಬದಲಿ ಸೈಟ್ ಹಂಚಿಕೆಯಲ್ಲಿ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಮೈಸೂರು ಮುಡಾದಿಂದ 50:50 ಸೈಟ್ ಹಂಚಿಕೆ ಹಗರಣದಲ್ಲಿ(Muda scam) ಸಿಎಂ ವಿರುದ್ಧ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ದೂರು ನೀಡಲಾಗಿದೆ. ಸಿಎಂ (Siddaramaiah) ಪತ್ನಿಗೆ ಬದಲಿ ಸೈಟ್ ಹಂಚಿಕೆಯಲ್ಲಿ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ರಿಂದ ದೂರು ನೀಡಲಾಗಿದೆ. ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಕೆ ಮಾಡಿಕೊಂಡಿದ್ದಾರೆ. ಹಕ್ಕು ಬಾದ್ಯತೆ ಇಲ್ಲದವರಿಂದ ಬಾಮೈದನಿಗೆ ಭೂಮಿ ಕೊಡಿಸಿದ್ದಾರೆ. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಭೂಮಿ ನೋಂದಣಿ ಮಾಡಿಕೊಂಡಿದ್ದಾರೆ. ಸಿಎಂ ಕುಟುಂಬದವರು ದಲಿತರ ಭೂಮಿ ಕಿತ್ತುಕೊಂಡಿದ್ದಾರೆ. ಮೋಸದಿಂದ ತಮ್ಮ ಪತ್ನಿಗೆ ಜಮೀನು ಬರೆಸಿಕೊಂಡಿದ್ದಾರೆ. ಭೂಮಿ ಕಬಳಿಸಲು ಸಿಎಂ ಕುಟುಂಬದ ಕೆಲವರ ಬಳಕೆ ಮಾಡಲಾಗಿದೆ. ಸಿಎಂ ಪತ್ನಿ ಹಾಗೂ ಸಹಕಾರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭೂಮಿ ಕಳೆದುಕೊಂಡ ದಲಿತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: 20 ಕೋಟಿ ಸಿನಿಮಾಗಳಿಸಿದ್ದು 100 ಕೋಟಿ ಪ್ಲಸ್..ಕಡಿಮೆ ಹಾಕಿ ಜಾಸ್ತಿಗಳಿಸೋದೆ ಟ್ರೆಂಟ್ !