ಸೋಂಕಿತರ ಅಂತ್ಯಕ್ರಿಯೆಗೆ ಶಿವಮೊಗ್ಗದಲ್ಲಿ ವಿರೋಧ..!

ಮುಖ್ಯಮಂತ್ರಿ ತವರು ಕ್ಷೇತ್ರ ಶಿವಮೊಗ್ಗದಲ್ಲೂ ಅಂತಹದ್ದೇ ಘಟನೆ ಮರುಕಳಿಸಿದೆ. ಗುರುವಾರವಷ್ಟೇ 70 ವರ್ಷದ ವೃದ್ದರೊಬ್ಬರು ಕೊರೋನಾಗೆ ಬಲಿಯಾಗಿದ್ದರು. ಬಳಿಕ ವಿದ್ಯಾನಗರದ ರೋಟರಿ ಸ್ಮಶಾನದಲ್ಲಿ ಸಮಾಧಿ ಮಾಡಲು ಆರೋಗ್ಯ ಇಲಾಖೆ ಮುಂದಾಗಿತ್ತು. ಆದರೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

First Published Jul 11, 2020, 1:20 PM IST | Last Updated Jul 11, 2020, 1:20 PM IST

ಶಿವಮೊಗ್ಗ(ಜು.11): ಕೊರೋನಾ ವೈರಸ್ ಹಬ್ಬುತ್ತಿರುವ ರೀತಿ ನೋಡಿದರೆ ನಿಜಕ್ಕೂ ಗಾಬರಿ ಹುಟ್ಟಿಸುತ್ತಿದೆ. ಇದರ ನಡುವೆ ಕೊರೋನಾದಿಂದ ಸಾವನ್ನಪ್ಪಿವರ ಅಂತ್ಯ ಸಂಸ್ಕಾರ ನಡೆಸುವುದು ಜಿಲ್ಲಾಡಳಿತಗಳ ಪಾಲಿಗೆ ದೊಡ್ಡ ತಲೆನೋವಾಗುತ್ತಿದೆ. ಈಗಾಗಲೇ ರಾಜ್ಯಾದ್ಯಂತ ಹಲವೆಡೆ ಸೋಂಕಿತರ ಅಂತ್ಯಸಂಸ್ಕಾರಕ್ಕೆ ವಿರೋಧ ವ್ಯಕ್ತವಾಗಿದ್ದನ್ನು ಗಮನಿಸಿದ್ದೇವೆ.

ಈಗ ಮುಖ್ಯಮಂತ್ರಿ ತವರು ಕ್ಷೇತ್ರ ಶಿವಮೊಗ್ಗದಲ್ಲೂ ಅಂತಹದ್ದೇ ಘಟನೆ ಮರುಕಳಿಸಿದೆ. ಗುರುವಾರವಷ್ಟೇ 70 ವರ್ಷದ ವೃದ್ದರೊಬ್ಬರು ಕೊರೋನಾಗೆ ಬಲಿಯಾಗಿದ್ದರು. ಬಳಿಕ ವಿದ್ಯಾನಗರದ ರೋಟರಿ ಸ್ಮಶಾನದಲ್ಲಿ ಸಮಾಧಿ ಮಾಡಲು ಆರೋಗ್ಯ ಇಲಾಖೆ ಮುಂದಾಗಿತ್ತು. ಆದರೆ ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೊರೋನಾ ಕಾಟ: 'ಅಗ್ರಿಕಲ್ಚರಲ್ ಪಿಹೆಚ್‌ಡಿ, ಎಂಎಸ್‌ಸಿ, ಡಾಕ್ಟರೇಟ್‌ ಪರೀಕ್ಷೆ ಮುಂದೂಡಿಕೆ'

ಬಳಿಕ ಅಧಿಕಾರಿಗಳು ಸ್ಥಳೀಯರ ಮನವೊಲಿಸಿ ಶವವನ್ನು ಸುಡುವ ಮೂಲಕ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಕುರಿತಂತೆ ನಮ್ಮ ಪ್ರತಿನಿಧಿ ರಾಜೇಶ್ ಕಾಮತ್ ನಡೆಸಿದ ವಾಕ್ ಥ್ರೂ ಇಲ್ಲಿದೆ ನೋಡಿ.

Video Top Stories