ಶಿವಮೊಗ್ಗ: 5 ಲಕ್ಷ ರೂ ಮೌಲ್ಯದ ವಸ್ತು ಹಿಂದಿರುಗಿಸಿದ ಆಟೋ ಚಾಲಕ
ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಕೆಲವು ಬಾಂಡ್ಸ್ ಸೇರಿ 5 ಲಕ್ಷ ರೂ . ಮೌಲ್ಯದ ವಸ್ತುಗಳಿದ್ದ ಬ್ಯಾಗನ್ನು, ಆಟೋ ಚಾಲಕ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ (ಸೆ. 14): ಪ್ರಯಾಣಿಕರೊಬ್ಬರು ಬಿಟ್ಟುಹೋಗಿದ್ದ ಕೆಲವು ಬಾಂಡ್ಸ್ ಸೇರಿ 5 ಲಕ್ಷ ರೂ . ಮೌಲ್ಯದ ವಸ್ತುಗಳಿದ್ದ ಬ್ಯಾಗನ್ನು, ಆಟೋ ಚಾಲಕ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಹೊಯ್ಸಳ ಕೋ ಆಪರೇಟಿವ್ ಸೊಸೈಟಿಯ ಕಾರ್ಯದರ್ಶಿ ಆಗಿರುವ ರಮೇಶ್ ಜೈಲು ರಸ್ತೆಯಿಂದ ಗುಂಡಪ್ಪ ಶೆಡ್‌ವರೆಗೆ ಆಟೋದಲ್ಲಿ ಪ್ರಯಾಣಿಸಿದ್ದರು . ಇಳಿದು ಹೋಗುವಾಗ ತಮ್ಮ ಬ್ಯಾಗನ್ನು ಮರೆತು ಹೋಗಿದ್ದಾರೆ. ಕೂಡಲೇ ಆಟೋ ಚಾಲಕ ಮಜೀದ್, ಕೋಟೆ ಪೋಲಿಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿದ್ದ ಮಾಹಿತಿ ಆಧಾರದ ಮೇಲೆ ವಾರಸುದಾರರನ್ನು ಹುಡುಕಿ ಅವರಿಗೆ ಬ್ಯಾಗನ್ನು ಹಿಂದಿರುಗಿಸಲಾಗಿದೆ. ಮಜೀದ್ ಅವರ ಕಾರ್ಯಕ್ಕೆ ನಗರದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.