ಕೊರೋನಾ ಸ್ಫೋಟ: ಚಿಕ್ಕಪೇಟೆ ಅಯ್ತು, ಈಗ ಶಿಡ್ಲಘಟ್ಟವೂ ಸೆಲ್ಫ್ ಲಾಕ್‌ಡೌನ್
ಬೆಂಗಳೂರಿನ ಚಿಕ್ಕಪೇಟೆ ಬಳಿಕ ಇದೀಗ ಶಿಡ್ಲಘಟ್ಟದಲ್ಲೂ ಕೂಡ ಸೆಲ್ಫ್ ಲಾಕ್‌ಡೌನ್|ಸಂಜೆ ನಾಲ್ಕು ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು| ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್| ಶಿಡ್ಲಘಟ್ಟ ಪಟ್ಟಣದಲ್ಲಿ ಹೆಚ್ಚುತ್ತಿರುವ ಕೋವಿಡ್ ಕೇಸ್|
ಚಿಕ್ಕಬಳ್ಳಾಪುರ(ಜೂ.22): ರಾಜ್ಯದಲ್ಲಿ ದಿನೇ ದಿನೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಹಲವು ಕಲೆ ಸ್ವಯುಂ ಲಾಕ್‌ಡೌನ್ ಮಾಡಿಕೊಳ್ಳಲಾಗುತ್ತಿದೆ. ಬೆಂಗಳೂರಿನ ಚಿಕ್ಕಪೇಟೆ ಬಳಿಕ ಇದೀಗ ಶಿಡ್ಲಘಟ್ಟದಲ್ಲೂ ಕೂಡ ಸೆಲ್ಫ್ ಲಾಕ್‌ಡೌನ್ ಆಗುತ್ತಿದೆ. ಸಂಜೆ ನಾಲ್ಕು ಗಂಟೆಯವರೆಗೆ ಮಾತ್ರ ವ್ಯಾಪಾರ ವಹಿವಾಟು ಇರುತ್ತದೆ. ಬಳಿಕ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ಮಾಡಲಾಗುತ್ತಿದೆ.
ರಾಜ್ಯದಲ್ಲಿ ಹೆಚ್ಚಾಗ್ತಿದೆ ಕೊರೊನಾ; ಮತ್ತೆ ಲಾಕ್‌ಡೌನ್ ಆಗುತ್ತಾ?
ಶಿಡ್ಲಘಟ್ಟ ಪಟ್ಟಣದಲ್ಲಿ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಲು ತೀರ್ಮಾಣ ಮಾಡಲಾಗಿದೆ. ಶಿಡ್ಲಘಟ್ಟ ಪಟ್ಟಣದಲ್ಲಿ ಕೋವಿಡ್ ಕೇಸ್‌ಗಳು ಹೆಚ್ಚಾಗುತ್ತಿವೆ. ಇದರಿಂದ ಲಾಕ್‌ಡೌನ್ ನಿರ್ಧಾರಕ್ಕೆ ಬರಲಾಗಿದೆ.