ಬೆಳಗಾವಿ: ತಗಡಿನ ಶೆಡ್ ಕುಸಿದು, ವಿದ್ಯುತ್ ಸ್ಪರ್ಶದಿಂದ ಸಹೋದರರಿಬ್ಬರು ದುರ್ಮರಣ
ಬೆಳಗಾವಿಯ ದೇಸೂರ ಗ್ರಾಮದಲ್ಲಿ ಮಹಾಮಳೆಗೆ ಸಹೋದರರಿಬ್ಬರು ಬಲಿಯಾಗಿದ್ದಾರೆ. ಬಸವರಾಜ್ ವಡ್ಡರ್ ಹಾಗೂ ವೆಂಕಟೇಶ್ ವಡ್ಡರ್, ಮೃತ ದುರ್ದೈವಿಗಳು.
ಬೆಳಗಾವಿ (ಅ. 11): ಇಲ್ಲಿನ ದೇಸೂರ ಗ್ರಾಮದಲ್ಲಿ ಮಹಾಮಳೆಗೆ ಸಹೋದರರಿಬ್ಬರು ಬಲಿಯಾಗಿದ್ದಾರೆ. ಬಸವರಾಜ್ ವಡ್ಡರ್ ಹಾಗೂ ವೆಂಕಟೇಶ್ ವಡ್ಡರ್, ಮೃತ ದುರ್ದೈವಿಗಳು. ಸಂಜೆ ಸುರಿದ ನಿರಂತರ ಮಳೆಗೆ ತಗಡಿನ ಶೆಡ್ ಕುಸಿದು, ಶೆಡ್‌ಗೆ ಕಲ್ಪಿಸಿದ್ದ ವಿದ್ಯುತ್ ಸ್ಪರ್ಶದಿಂದ ಸಹೋದರರಿಬ್ಬರು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬೆಳಗಾವಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.