Sewage Water Issue : ಬಡಾವಣೆಗಳ ನಡುವೆ ನದಿಯಂತೆ ಹರಿಯುತ್ತಿದೆ ಕೊಳಚೆ ನೀರು

ನೊರೆ ಹಾಲಿನಂತೆ ಉಕ್ಕಿ ಹರಿಯುತ್ತಿರುವ ನೀರು ಮೈಸೂರು ನಗರದ ಯುಜಿಡಿ ನೀರು. ಭೂಮಿ ಒಳಗೆ ಪೈಪ್‌ಗಳ ಮೂಲಕ ಹರಿಯಬೇಕಿದ್ದ ನೀರು ನದಿಯಂತೆ ಮೇಲಕ್ಕೆ ಹರಿಯುತ್ತಿದೆ. ಇದರಿಂದ ಹಲವು ಬಡಾವಣೆಗಳಲ್ಲಿ ವಾಸಿಸುವ ಜನರು ಅನಾರೋಗ್ಯದ ಆತಂಕದಲ್ಲಿ ಇದ್ದಾರೆ. ಸ್ವಚ್ಛತೆ ಕಾಪಾಡಬೇಕಾದ ಅಧಿಕಾರಿಗಳೇ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಶ್ರೀರಾಮ ಪುರ ಬಡವಾಣೆ, ರಾಯನಕೆರೆ, ಮೂಕಾಂಬಿಕ ಬಡಾವಣೆ ಜನರು  ಆತಂಕದಿಂದ ಇದ್ದಾರೆ. 

First Published Dec 13, 2021, 10:25 AM IST | Last Updated Dec 13, 2021, 10:25 AM IST

ಮೈಸೂರು (ಡಿ.13): ನೊರೆ ಹಾಲಿನಂತೆ ಉಕ್ಕಿ ಹರಿಯುತ್ತಿರುವ ನೀರು ಮೈಸೂರು ನಗರದ ಯುಜಿಡಿ ನೀರು (UGD Water). ಭೂಮಿ ಒಳಗೆಪೈಪ್‌ಗಳ ಮೂಲಕ ಹರಿಯಬೇಕಿದ್ದ ನೀರು ನದಿಯಂತೆ ಮೇಲಕ್ಕೆ ಹರಿಯುತ್ತಿದೆ. ಇದರಿಂದ ಹಲವು ಬಡಾವಣೆಗಳಲ್ಲಿ ವಾಸಿಸುವ ಜನರು ಅನಾರೋಗ್ಯದ (Health) ಆತಂಕದಲ್ಲಿ ಇದ್ದಾರೆ. ಸ್ವಚ್ಛತೆ ಕಾಪಾಡಬೇಕಾದ ಅಧಿಕಾರಿಗಳೇ ಈ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಶ್ರೀರಾಮ ಪುರ ಬಡವಾಣೆ, ರಾಯನಕೆರೆ, ಮೂಕಾಂಬಿಕ ಬಡಾವಣೆ ಜನರು  ಆತಂಕದಿಂದ ಇದ್ದಾರೆ. 

Bengaluru Rain| ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಇಲ್ಲಿ ಸಮೀಪದಲ್ಲಿ ಕೃಷಿ ಭೂಮಿಯೂ ಇದ್ದು, ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮಳೆಗಾಲ (Rain) ಆರಂಭವಾದರಂತು ಇಲ್ಲಿನ ಜನರ ಪಾಡು ಹೇಳತೀರದು. ದೊಡ್ಡ ನದಿಯಂತೆ ಕೊಳಚೆ ನೀರು ಹರಿಯುತ್ತಿದ್ದು, ಕೆಟ್ಟ ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡು ಬದುಕುವಂತಾಗಿದೆ.