ಗೋಶಾಲೆಯಲ್ಲಿ ಮೇವಿನ ಕೊರತೆ; ಅಧಿಕಾರಿಗಳಿಗೆ ಕಿವಿ ಸಮಸ್ಯೆ!

ಒಂದು ಕಡೆ ಕಣ್ಣು ಮುಚ್ಚಾಲೆಯಾಡುತ್ತಿರುವ ಮುಂಗಾರು, ಇನ್ನೊಂದು ಕಡೆ ಬೆಂಬಿಡದ ಬರ. ಜನ ಅಷ್ಟೇ ಅಲ್ಲ, ಜಾನವಾರುಗಳು ಕೂಡಾ ನೀರು-ಮೇವಿಗಾಗಿ ಪರದಾಡುತ್ತಿವೆ. ಗೋವುಗಳನ್ನು ಗೋಶಾಲೆಯಲ್ಲಿ ಬಿಟ್ಟರೆ ಏನಾದ್ರೂ ತಿಂದುಂಡು ಬದುಕಬಹುದು ಎಂದು ಅಲ್ಲಿ ಬಿಟ್ಟರೆ, ಅಲ್ಲಿಯೂ ಮೇವಿಲ್ಲ! ಇನ್ನು ಹೋಗೋದಾದ್ರೆ ಎಲ್ಲಿಗೆ? 

First Published Jun 28, 2019, 6:22 PM IST | Last Updated Jun 28, 2019, 6:22 PM IST

ದಾವಣಗೆರೆ (ಜೂ.28): ಒಂದು ಕಡೆ ಕಣ್ಣು ಮುಚ್ಚಾಲೆಯಾಡುತ್ತಿರುವ ಮುಂಗಾರು, ಇನ್ನೊಂದು ಕಡೆ ಬೆಂಬಿಡದ ಬರ. ಜನ ಅಷ್ಟೇ ಅಲ್ಲ, ಜಾನವಾರುಗಳು ಕೂಡಾ ನೀರು-ಮೇವಿಗಾಗಿ ಪರದಾಡುತ್ತಿವೆ. ಗೋವುಗಳನ್ನು ಗೋಶಾಲೆಯಲ್ಲಿ ಬಿಟ್ಟರೆ ಏನಾದ್ರೂ ತಿಂದುಂಡು ಬದುಕಬಹುದು ಎಂದು ಅಲ್ಲಿ ಬಿಟ್ಟರೆ, ಅಲ್ಲಿಯೂ ಮೇವಿಲ್ಲ! ಇನ್ನು ಹೋಗೋದಾದ್ರೆ ಎಲ್ಲಿಗೆ?

ಭೀಕರ ಬರದ ಹಿನ್ನಲೆಯಲ್ಲಿ ದಾವಣಗೆರೆಯ ಜಗಳೂರಿನ ಮಡ್ರಳ್ಳಿಯಲ್ಲಿರುವ ಗೋಶಾಲೆಯಲ್ಲಿ ಗೋವುಗಳ ಸಂಖ್ಯೆ ದಿನೇ ದಿನೇ ಏರುತ್ತಿದೆ. ಈಗಾಗಲೇ 2 ಸಾವಿರಕ್ಕಿಂತಲೂ ಹೆಚ್ಚು ಗೋವುಗಳು ಇಲ್ಲಿವೆ. ಇತರ ಮೂಲಭೂತ ಸೌಕರ್ಯ- ಸುರಕ್ಷತಾ ಕ್ರಮಗಳನ್ನು ಸದ್ಯಕ್ಕೆ ಪಕ್ಕಕ್ಕಿಡಿ, ಇಲ್ಲಿ ತಿನ್ನಕ್ಕೆ ಮೇವೇ ಇಲ್ಲ! 500 ಗೋವುಗಳಿಗೆ ಸಾಕಾಗುವಷ್ಟು ಮಾತ್ರ ಮೇವು ಸರಬರಾಜು ಆಗುತ್ತಿದೆ. ಉಳಿದ ಗೋವುಗಳು ಏನ್ಮಾಡಬೇಕು? ಅಧಿಕಾರಿಗಳಂತೂ ಕಿವಿ ಮುಚ್ಕೊಂಡಿದ್ದಾರೆ!   

 

Video Top Stories